ಗುಲ್ಬರ್ಗ: ಕಾಂಗ್ರೆಸ್ ಕೈ ಹಿಡಿದ ಜೆಡಿಎಸ್

7

ಗುಲ್ಬರ್ಗ: ಕಾಂಗ್ರೆಸ್ ಕೈ ಹಿಡಿದ ಜೆಡಿಎಸ್

Published:
Updated:

ಗುಲ್ಬರ್ಗ: ಗುಲ್ಬರ್ಗ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿಗಿಂತಲೂ ಕಾಂಗ್ರೆಸ್ ಪಕ್ಷವು ಕಡಿಮೆ ಸ್ಥಾನಗಳನ್ನು ಹೊಂದಿದ್ದರೂ, ಶುಕ್ರವಾರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ದೀಪಕನಾಗ್ ಪುಣ್ಯಶೆಟ್ಟಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.ಚಿಂಚೋಳಿ ತಾಲ್ಲೂಕಿನ ಐನೋಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ 100 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ 24ರ ಹರೆಯದ ದೀಪಕನಾಗ್, ರಾಜ್ಯದಲ್ಲೆ ಅತ್ಯಂತ ಕಡಿಮೆ ವಯಸ್ಸಿನ ಜಿ.ಪಂ. ಅಧ್ಯಕ್ಷ ಎನ್ನುವ ಗೌರವಕ್ಕೆ ಇದೀಗ ಪಾತ್ರರಾಗಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.ಜಿಪಂ ಒಟ್ಟು 43 ಸ್ಥಾನಗಳಲ್ಲಿ ಕಾಂಗ್ರೆಸ್ 19, ಬಿಜೆಪಿ 20, ಜೆಡಿಎಸ್ 3 ಹಾಗೂ ಒಬ್ಬರು ಪಕ್ಷೇತರ ಅಭ್ಯರ್ಥಿಗಳಿದ್ದಾರೆ. ಆರಂಭದಿಂದ ಒಂದು ವರ್ಷದವರೆಗೂ ಬಿಜೆಪಿಯೊಂದಿಗಿದ್ದ ಜೆಡಿಎಸ್ ಪಕ್ಷದ ಮೂರು ಅಭ್ಯರ್ಥಿಗಳು ಇದೀಗ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿದ್ದರಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ಕಾಂಗ್ರೆಸ್ ಪಾಲಾದವು.ಬಿಜೆಪಿಯ ಶಿವಪ್ರಭು ಪಾಟೀಲ ವಿರುದ್ಧ ಅವಿಶ್ವಾಸ ನಿರ್ಣಯದ ಪರ ಬಹುಮತ ಲಭಿಸಿದ್ದರಿಂದ ಜಿ.ಪಂ. ಅಧ್ಯಕ್ಷ ಸ್ಥಾನ ಖಾಲಿಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry