ಗುಲ್ಬರ್ಗ ನಗರ ಪ್ರದಕ್ಷಿಣೆ: ಮುಖ್ಯಮಂತ್ರಿಗೆ ಮನವಿ

7

ಗುಲ್ಬರ್ಗ ನಗರ ಪ್ರದಕ್ಷಿಣೆ: ಮುಖ್ಯಮಂತ್ರಿಗೆ ಮನವಿ

Published:
Updated:

ಗುಲ್ಬರ್ಗ:  ಗುಲ್ಬರ್ಗದಲ್ಲಿ ಅ. 18ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೆಲವು ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ವಚನೋತ್ಸವ ಪ್ರತಿಷ್ಠಾನ ಯುವ ಘಟಕದ ಅಧ್ಯಕ್ಷ ಶಿವರಾಜ ಎಸ್. ಅಂಗಡಿ ಅವರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.ನೀಡಬೇಕಾದ ಆದ್ಯತೆಗಳು: ನಗರವನ್ನು ಪ್ರದಕ್ಷಿಣೆ ಮಾಡಬೇಕು. ನಗರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಚಿವರು ಭೇಟಿ ನೀಡಿ ಅಲ್ಲಿನ ಸಮಸ್ಯೆ ಹಾಗೂ ಸಾರ್ವಜನಿಕರು ಕೊಟ್ಟಿರುವ ದೂರುಗಳನ್ನು ಇತ್ಯರ್ಥಪಡಿಸಬೇಕು. ಜಿಲ್ಲೆಯ ಎಲ್ಲ ಶಾಸಕರಿಗೂ ಹಾಗೂ ನಗರದ ಎಲ್ಲ ಮಹಾನಗರ ಪಾಲಿಕೆ ಸದಸ್ಯರಿಗೂ ತಮ್ಮ ಅನುದಾನ, ಮುಗಿದ ಕಾಮಗಾರಿ ಹಾಗೂ ಇನ್ನು ಮಾಡಬೇಕಾದ ಕಾಮಗಾರಿಗಳ ಕುರಿತು ಚರ್ಚಿಸಿ ಮುಂದಿನ ಕಾಮಗಾರಿಗಳಿಗೆ ಆದೇಶ ನೀಡುವುದುಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ರೈತನ ಭೂಮಿಗೆ ಸಂಬಂಧಪಟ್ಟಂತೆ 1864ರಲ್ಲಿ ಬ್ರಿಟಿಷರ ಕಾಲದಲ್ಲಿ ಅಳತೆ ಮಾಡಲಾಗಿತ್ತು. ಇಲ್ಲಿಯವರೆಗೆ ಯಾವುದೇ ಸರ್ವೆ ಆಗಿರುವುದಿಲ್ಲ. ಕರ್ನಾಟಕ ಭೂಕಂದಾಯ ನಿಯಮ 115ರಂತೆ ಸರ್ವೆ ಖಾತ್ರಿಯು 30 ವರ್ಷವಾಗಿದೆ. ನೂರಾರು ವರ್ಷಗಳು ಕಳೆದರೂ ಮರು ಭೂಮಾಪನ ಆಗದ ಕಾರಣ ಕೂಡಲೇ ಮರುಭೂಮಾಪನ ಮಾಡಲು ಕ್ರಮ ಜರುಗಿಸಬೇಕೆಂದು ಕೋರಿದ್ದಾರೆ.

ಭೂದಾಖಲೆಗಳ ಹಾಗೂ ಮಹಾನಗರ ಪಾಲಿಕೆಯ ಇಲಾಖೆಗಳಲ್ಲಿ ಭೂನಕ್ಷೆ, ಟೋಂಚ್ ನಕಾಶೆ, ಆಕಾರ್ ಬಂದ್ ಹೀಗೆ ಅನೇಕ ದಾಖಲೆಗಳು ಹಳೆಯದಾಗಿದ್ದು, ಹರಿದು ಹಾಳಾಗುತ್ತಿವೆ. ಇವು ಹಾಳಾಗದಂತೆ ಕ್ರಮಕೈಗೊಳ್ಳಬೇಕು ಎಂದಿದ್ದಾರೆ. ಮತದಾನ ಪಟ್ಟಿ ನಿರಂತರ ಪರಿಷ್ಕರಣ ಪ್ರಕ್ರಿಯೆ ಕಡ್ಡಾಯಗೊಳಿಸಬೇಕು ಎನ್ನುವುದನ್ನು ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry