ಗುಲ್ಬರ್ಗ ಬಂದ್ ಯಶಸ್ವಿ

7

ಗುಲ್ಬರ್ಗ ಬಂದ್ ಯಶಸ್ವಿ

Published:
Updated:

ಗುಲ್ಬರ್ಗ: ನಗರಕ್ಕೆ ಮೂಲ ಸೌಕರ್ಯ ಒದಗಿಸಲು ಆಗ್ರಹಿಸಿ ಜೈ ಕರ್ನಾಟಕ ರಕ್ಷಣಾ ವೇದಿಕೆ ಬುಧವಾರ ಕರೆ ನೀಡಿದ್ದ `ಗುಲ್ಬರ್ಗ ಬಂದ್~ ಯಶಸ್ವಿಯಾಯಿತು. ಬಂದ್ ಶಾಂತಿಯುತವಾಗಿತ್ತು.

 

ಔಷಧಿ ಅಂಗಡಿ ಹೊರತು ಪಡಿಸಿ ಹೋಟೆಲ್, ಸರಾಫ್ ಬಜಾರ್, ಶಾಲಾ- ಕಾಲೇಜುಗಳು, ಬಟ್ಟೆ ಅಂಗಡಿಗಳು, ಎಪಿಎಂಸಿ ಸೇರಿದಂತೆ ಎಲ್ಲ ವ್ಯಾಪಾರಸ್ಥರು ತಮ್ಮ ಒಂದು ದಿನದ ವಹಿವಾಟು ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ಸೂಚಿಸಿದರು. ಸರ್ಕಾರಿ ಹಾಗೂ ಖಾಸಗಿ ಬಸ್ ಸಂಚಾರವು ಸಂಜೆವರೆಗೂ ಸಂಪೂರ್ಣ ಸ್ಥಗಿತಗೊಂಡಿತ್ತು. ಬಂದ್‌ಗೆ ಒಟ್ಟು 19 ಸಂಘಟನೆಗಳು ಬೆಂಬಲ ಸೂಚಿಸಿದ್ದವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry