ಶುಕ್ರವಾರ, ನವೆಂಬರ್ 15, 2019
27 °C

ಗುಲ್ಬರ್ಗ: ಬಿಜೆಪಿ ತೊರೆದ ಜವಳಿ

Published:
Updated:

ಗುಲ್ಬರ್ಗ: ಲೋಕಸಭೆ ಮಾಜಿ ಸದಸ್ಯ ಮತ್ತು ಬಿಜೆಪಿ ಹಿರಿಯ ಮುಖಂಡ ಡಾ. ಜಿ.ಜಿ.ಜವಳಿ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.ಈ ಕುರಿತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಅವರಿಗೆ ಪತ್ರ ರವಾನಿಸಿದ್ದೇನೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಅಳಿಯ ಕೈಲಾಸನಾಥ ವಿ. ಪಾಟೀಲ ಪರವಾಗಿ ಚುನಾವಣಾ ಪ್ರಚಾರ ಮಾಡಲು ಬಯಸಿದ್ದೇನೆ.ಆದ್ದರಿಂದ ಬಿಜೆಪಿಗೆ ವಿದಾಯ ಹೇಳುತ್ತಿರುವುದಾಗಿ ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.ಮುಂದಿನ ಹೆಜ್ಜೆ ಬಗ್ಗೆ ಇನ್ನು ಒಂದೆರಡು ದಿನದಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.

ಪ್ರತಿಕ್ರಿಯಿಸಿ (+)