ಗುಲ್ಬರ್ಗ: ಬೀದಿ ನಾಯಿಗಳು

7

ಗುಲ್ಬರ್ಗ: ಬೀದಿ ನಾಯಿಗಳು

Published:
Updated:

ಗುಲ್ಬರ್ಗ: ನಗರದ ಮೋಮಿನ್‌ಪುರದಲ್ಲಿ ಶುಕ್ರವಾರ ಬೆಳಿಗ್ಗೆ ಬೀದಿನಾಯಿಗಳು ಕಚ್ಚಿ ಸುಮಾರು 25 ಮಕ್ಕಳು ಗಾಯಗೊಂಡಿದ್ದಾರೆ.ಶಾಲೆಗೆ, ಮದರಸಕ್ಕೆ ಹೋಗುತ್ತಿದ್ದ ಹಾಗೂ ಆಟವಾಡುತ್ತಿದ್ದ ಮಕ್ಕಳ ಮೇಲೆ ನಾಯಿಗಳು ಎರಗಿವೆ.

ಗಾಯಗೊಂಡ ಸುಮಾರು 13 ಮಕ್ಕಳಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.  ನಗರದ ಬ್ರಹ್ಮಪುರ, ಶಹಾಬಜಾರ್ ಮತ್ತಿತರ ಕಡೆಗಳಲ್ಲಿ ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸುವ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿದ್ದು, ಆಡಳಿತವು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry