ಗುಲ್ಬರ್ಗ ವಿವಿ: ಕ್ರೀಡಾಕೂಟ ಆರಂಭ

7

ಗುಲ್ಬರ್ಗ ವಿವಿ: ಕ್ರೀಡಾಕೂಟ ಆರಂಭ

Published:
Updated:

 


ಗುಲ್ಬರ್ಗ: ಕ್ರೀಡೆಯಲ್ಲಿ ಸಾಮಾನ್ಯನೊಬ್ಬ ಸರ್ವಶ್ರೇಷ್ಠ ಆಗಲು ಆತನ ಶ್ರಮ, ಉತ್ತಮ ತರಬೇತುದಾರ ಹಾಗೂ ಉತ್ತಮ ವ್ಯವಸ್ಥೆ ಅಗತ್ಯ ಎಂದು ಮ್ಯಾರಥಾನ್ ಓಟಗಾರ ವೀರೇಶ್ ಹಿರೇಮಠ ಹೇಳಿದರು. ಗುಲ್ಬರ್ಗ ವಿಶ್ವವಿದ್ಯಾಲಯದ 32ನೇ ಅಂತರ ಮಹಾವಿದ್ಯಾಲಯ ಕ್ರೀಡಾಕೂಟವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. 

ಒಬ್ಬ ಹುಡುಗನನ್ನು ಕ್ರೀಡಾಪಟುವಾಗಿ  ರೂಪಿಸಲು ಆತನ ಶ್ರಮ ಬಹುಮುಖ್ಯ. ಸತತ ಸಾಧನೆ ಜೊತೆ ಸಂಸ್ಕಾರ ಕಾಯ್ದುಕೊಳ್ಳಬೇಕು. 

ಆತನಿಗೆ  ಮನೆ ಹಾಗೂ ಉತ್ತಮ ಗುರುಗಳ ಪ್ರೋತ್ಸಾಹ ಸಿಗಬೇಕು. ಅದರ ಜೊತೆ ಉತ್ತಮ ಕ್ರೀಡಾ ವ್ಯವಸ್ಥೆಯೂ ಇರಬೇಕು. ಸಮಾಜ ಆತನನ್ನು ಪ್ರೋತ್ಸಾಹಿಸಿ ಬೆಳೆಸಬೇಕು ಎಂದರು. ಕ್ರೀಡಾಪಟುಗಳನ್ನು ನೋಡುತ್ತಲೇ ನಾನು ಓಡಲು ಆರಂಭಿಸಿದೆ. ಹೈಸ್ಕೂಲಿನಲ್ಲಿ ನನಗೆ  ದೈಹಿಕ ಶಿಕ್ಷಕರು ಇರಲಿಲ್ಲ. ಪಿಯುಸಿಯಲ್ಲಿ ದೈಹಿಕ ಶಿಕ್ಷಕರ ಮುಖವನ್ನೇ ನೋಡಲಿಲ್ಲ. ಪದವಿಯ ದೈಹಿಕ ಶಿಕ್ಷಕರೂ ಪ್ರೋತ್ಸಾಹ ನೀಡಿಲ್ಲ. ಆದರೆ ವೈಯಕ್ತಿಕ ಹಠದಿಂದ ಭಾರತದಲ್ಲಿ ನಾಲ್ಕನೇ ಸ್ಥಾನಕ್ಕೆ ಬಂದಿದ್ದೇನೆ ಎಂದರು. ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಪ್ರಯತ್ನ, ಪ್ರಾಮಾಣಿಕತೆ ಮುಖ್ಯ. ಶ್ರಮ ವಹಿಸಿ ನಿಗದಿತ ಗುರಿಯೆಡೆಗೆ ಮುನ್ನಡೆದರೆ ಯಶಸ್ಸು ಸಿಗಲು ಸಾಧ್ಯ ಎಂದು ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಈ.ಟಿ.ಪುಟ್ಟಯ್ಯ ಹೇಳಿದರು. ಸಿಂಡಿಕೇಟ್ ಸದಸ್ಯರಾದ ಆರ್.ಬಿ.ಮಾಲಿಪಾಟೀಲ, ಶಾಂತಲಿಂಗ ಸಾವಳಗಿ, ಎಸ್.ಜಿ.ಭಾರತಿ, ದೈಹಿಕ ನಿರ್ದೇಶಕರಾದ ಎಂ.ಎಸ್. ಪಾಸೋಡಿ, ಸಿ.ಆರ್. ಭೈರೆಡ್ಡಿ, ರಾಜಕುಮಾರ್ ಕರವೇ, ಎಸ್.ಎಚ್.ಜಂಘೆ, ಡಾ.ಎನ್.ಜಿ. ಕಣ್ಣೂರ್ ಇದ್ದರು.  ನಿವೃತ್ತರಾದ ಪದ್ಮಾವತಿ, ಭಾರತಿ ಮತ್ತು ಅಗಡಿ ಅವರನ್ನು ಸನ್ಮಾನಿಸಲಾಯಿತು. ಫಲಿತಾಂಶ 

ಕ್ರೀಡಾಕೂಟದ ಆರಂಭಿಕ ಸ್ಪರ್ಧೆ 1500 ಮೀಟರ್ ಓಟದ ಪ್ರಥಮ ಸ್ಥಾನವನ್ನು ಕರ್ನಾಟಕ ಕಲಾ ಮತ್ತು ವಿಜ್ಞಾನ ಕಾಲೇಜಿನ ಹೇಮಲತಾ                       ಪಡೆದರೆ, ಸೇಡಂ ನೃಪತುಂಗ  ಕಾಲೇಜಿನ ಚನ್ನಬಸಮ್ಮ ದ್ವಿತೀಯ  ಸ್ಥಾನ ಪಡೆದರು. ಗುಲ್ಬರ್ಗ ವಿವಿಯ  ನಾಗವೇಣಿ ಆರ್. ಭಜನ್ ತೃತೀಯ ಸ್ಥಾನ ಪಡೆದರು. ಪುರುಷರ ವಿಭಾಗ

1500 ಮೀ. ಓಟ: ಇಸ್ತಾಕ್ ಅಹ್ಮದ್, ಎಸ್.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಾದನಹಿಪ್ಪರಗಾ (ಪ್ರ), ಬಸವರಾಜ್ ನಾಗೋಡ, ವಿಶ್ವವಿದ್ಯಾಲಯ ಗುಲ್ಬರ್ಗ (ದ್ವಿ), ಶಿವರಾಜ ರೆಡ್ಡಿ, ಎಸ್.ಎಸ್.ಟಿ. ಪದವಿ ಕಾಲೇಜು ಸಿಂಧನೂರು (ತೃ) ಶಾಟ್‌ಪುಟ್: ಶ್ರೀಧರ ಸಾಗರ, ಸಿನರ್ಜಿ ಕಾಲೇಜು ರಾಯಚೂರು (ಪ್ರ), ಅಬ್ದುಲ್ ಅಜೀಂ ನೃಪತುಂಗ ಕಾಲೇಜು ಸೇಡಂ (ದ್ವಿ), ಜಗದೀಶ ಡಿ. ನೃಪತುಂಗ ಕಾಲೇಜು (ತೃ), ದೇವದಾಸ್ ಆರ್., ವಿಶ್ವವಿದ್ಯಾಲಯ ಗುಲ್ಬರ್ಗ (ಚ)ಮಹಿಳೆಯರ ವಿಭಾಗಉದ್ದಜಿಗಿತ: ರೇಣುಕಾ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಪ್ರ), ಹೇಮಾವತಿ ಜಿ. ಕರ್ನಾಟಕ ಕಾಲೇಜು ಬೀದರ್ (ದ್ವಿ), ನೀತಾಶ್ರೀ ಗುಲ್ಬರ್ಗ ವಿಶ್ವವಿದ್ಯಾಲಯ (ತೃ), ಜ್ಯೋತಿ ಬಾಬುರಾವ್, ಬಿ.ಎಸ್.ಎನ್. ಬಿಇಡಿ ಕಾಲೇಜು ಗುಲ್ಬರ್ಗ (ಚ)

5000 ಮೀ:  ಜ್ಯೋತಿ ಬಾಬುರಾವ್, ಬಿ.ಎಸ್.ಎನ್. ಬಿಇಡಿ ಕಾಲೇಜು ಗುಲ್ಬರ್ಗ (ಪ್ರ), ಚನ್ನಬಸಮ್ಮ, ನೃಪತುಂಗ ಸೇಡಂ(ದ್ವಿ), ನಾಗವೇಣಿ, ವಿಶ್ವವಿದ್ಯಾಲಯ ಗುಲ್ಬರ್ಗ (ತೃ), ಉಮಾದೇವಿ, ಗುಲ್ಬರ್ಗ ವಿಶ್ವವಿದ್ಯಾಲಯ ಗುಲ್ಬರ್ಗ (ಚ) 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry