ಭಾನುವಾರ, ಜನವರಿ 19, 2020
24 °C

ಗುಲ್ಬರ್ಗ ವಿ.ವಿ ಲೈಂಗಿಕ ಕಿರುಕುಳ: ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲ­ಯದ ಅರ್ಥಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಪ್ರಜ್ಞಾ ಕಾನೂನು ಸಲಹಾ ಸಮಿತಿ ತೀವ್ರವಾಗಿ ಖಂಡಿಸಿವೆ.ರಾಜ್ಯದ ಬೇರೆ ಬೇರೆ ವಿ.ವಿಗಳಲ್ಲಿ ಸಂಶೋಧನಾ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇಂತಹ ಘಟನೆಗಳನ್ನು ಖಂಡಿಸಿ ಅನೇಕ ಬಾರಿ ಪ್ರತಿಭಟನೆ ನಡೆಸಿದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು­ಕೊಳ್ಳದಿರುವುದು ಖಂಡನೀಯ. ಗುಲ್ಬರ್ಗ ವಿ.ವಿ ವಿದ್ಯಾರ್ಥಿನಿಗೆ ದೂರು ವಾಪಸು ಪಡೆಯುವಂತೆ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ಕುಲಪತಿ ಹಾಗೂ ಕುಲಸಚಿವರು ಕ್ರಮಕೈಗೊಳ್ಳದಿ­ರುವುದು ಆತಂಕಕಾರಿ ಬೆಳವಣಿಗೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.ತಪ್ಪಿತಸ್ಥ ಪ್ರಾಧ್ಯಾಪಕರನ್ನು ಕೂಡಲೇ ಬಂಧಿಸಬೇಕು. ಪ್ರಕರಣ ದುರ್ಬಳ­ಗೊಳ್ಳ­ದಂತೆ ನೋಡಿಕೊಳ್ಳಬೇಕು. ದೂರು ವಾಪಸು ಪಡೆಯುವಂತೆ ಒತ್ತಡ ಹೇರಿದ ವಿ.ವಿ ಅಧ್ಯಾಪಕ ಹಾಗೂ ಅಧಿಕಾರಿಗಳ ಮೇಲೆ ಕ್ರಮ­ಕೈಗೊಳ್ಳಬೇಕು ಎಂದು ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ.ನೀಲಾ, ಪ್ರಜ್ಞಾ ಕಾನೂನು ಸಲಹಾ ಸಮಿತಿ ಅಧ್ಯಕ್ಷೆ ಡಾ.ಮೀನಾಕ್ಷಿ ಬಾಳಿ, ಉಪಾಧ್ಯಕ್ಷೆ ಡಾ.ಶಾಂತಾ ಮಠ, ಸಂಚಾಲಕಿ ಚಂದಮ್ಮ, ಜಿಲ್ಲಾ ಪಂಚಾ­ಯಿತಿ ಸದಸ್ಯೆ ಶೋಭಾ ಬಾಣಿ, ಡಾ. ಪ್ರಭು ಖಾನಾಪುರೆ, ಡಾ.ಶರಣಪ್ಪ ಸೈದಾಪುರ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.ಮುಂದುವರಿದ ಶೋಧ: ಗುಲ್ಬರ್ಗ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ­ಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸಹಾಯಕ ಪ್ರಾಧ್ಯಾಪಕ ದಶರಥ ನಾಯಕ ಬಂಧನಕ್ಕೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.‘ದಶರಥ ಅವರ ನಿಕಟವರ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಶೀಘ್ರವೇ ಆರೋಪಿಯನ್ನು ಬಂಧಿಸಲಾ­ಗು­ವುದು’ ಎಂದು ಪŁಕರಣದ ವಿಚಾರಣೆ­ನಡೆಸುತ್ತಿರುವ ಜಿಲ್ಲಾ ಪೊಲೀಸ್ ಸಹಾಯಕ ವರಿಷ್ಠಾಧಿಕಾರಿ (ಗ್ರಾಮಾಂತರ ಉಪ ವಿಭಾಗ) ಸಂತೋಷ ಬಾಬು ತಿಳಿಸಿದರು.

ವಿ.ವಿ ಬಂದ್ ವಾಪಸು

ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆಗಳು ನಡೆಯುತ್ತಿರುವ ಕಾರಣ ಡಿ. 13ರಂದು ಕರೆ ನೀಡಿದ್ದ ವಿ.ವಿ ಬಂದ್ ಅನ್ನು ವೀರಶೈವ ಯುವ ಬಳಗ ವಾಪಸು ಪಡೆದಿದೆ. ಡಿ. 17ರಂದು ಬೆಳಿಗ್ಗೆ 10.30 ಗಂಟೆಗೆ ಜಗತ್ ವೃತ್ತದಿಂದ ಜಿಲ್ಲಾ­ಧಿ­ಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಬಳಗದ ಅಧ್ಯಕ್ಷ ಮಲ್ಲಿಕಾರ್ಜುನ ಗರೂರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)