ಗುಲ್ಬರ್ಗ: ಶಿವಪ್ರಭು ಪಾಟೀಲ ಜಿ.ಪಂ. ಅಧ್ಯಕ್ಷ

7

ಗುಲ್ಬರ್ಗ: ಶಿವಪ್ರಭು ಪಾಟೀಲ ಜಿ.ಪಂ. ಅಧ್ಯಕ್ಷ

Published:
Updated:ಗುಲ್ಬರ್ಗ:  ಜಿಲ್ಲಾ ಪಂಚಾಯಿತಿ ಮೊದಲ ಅವಧಿಯ ಅಧ್ಯಕ್ಷರಾಗಿ ಬಿಜೆಪಿಯ ಶಿವಪ್ರಭು ಪಾಟೀಲ (ಮಹಾಗಾಂವ) ಆಯ್ಕೆಯಾದರು.ಗುರುವಾರ ನಗರದ ಜಿಲ್ಲಾ ಪಂಚಾಯಿತಿ ಹೊಸ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಹರ್ಷಾನಂದ ಗುತ್ತೇದಾರ (ತಡಕಲ್) ಆಯ್ಕೆಯಾದರು.ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಮೂವರು ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಎರಡೂ ಸ್ಥಾನಗಳಿಗೆ ತಲಾ ಇಬ್ಬರು ಕಣದಲ್ಲಿ ಉಳಿದದ್ದರಿಂದ ಚುನಾವಣೆ ಅನಿವಾರ್ಯವಾಯಿತು. ಪ್ರಾದೇಶಿಕ ಆಯುಕ್ತ ರಜನೀಶ ಗೋಯಲ್ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.ವಿಜೇತ ಅಭ್ಯರ್ಥಿಗಳು ತಲಾ 23 ಮತ ಪಡೆದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಯಾಗಿದ್ದ ಕಾಂಗ್ರೆಸ್‌ನ ದೀಪಕ್‌ನಾಗ್ ಹಾಗೂ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಸಾಬಣ್ಣ ಹನುಮಂತಪ್ಪ ತಲಾ 18 ಮತಗಳನ್ನು ಪಡೆದರು. ಜೇವರ್ಗಿ ತಾಲ್ಲೂಕು ನೆಲೋಗಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಶೋಭಾ ಬಾಣಿ ಮತ ಚಲಾಯಿಸಲಿಲ್ಲ. ಕಾಂಗ್ರೆಸ್‌ನ ನಿತೀನ್ ಗುತ್ತೇದಾರ ಗೈರುಹಾಜರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry