ಗುಳೇದಗುಡ್ಡ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ತೀವ್ರ ಪೈಪೋಟಿ

7

ಗುಳೇದಗುಡ್ಡ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ತೀವ್ರ ಪೈಪೋಟಿ

Published:
Updated:

ಗುಳೇದಗುಡ್ಡ: ಇಲ್ಲಿನ ಪುರಸಭೆಗೆ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ಹಾಗೂ ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಪೈಪೋಟಿ ಶುರುವಾಗಿದೆ.ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಎಂದು ಮೀಸಲಾಗಿದೆ. ಪುರಸಭೆಯ ಒಟ್ಟು 23 ವಾರ್ಡ್‌ಗಳಿಗೆ 9 ಜನ ಮಹಿಳೆಯರು, 14 ಜನ ಪುರುಷರು ಆಯ್ಕೆಯಾಗಿದ್ದಾರೆ. ಅವರಲ್ಲಿ ಬಿಜೆಪಿಯಿಂದ 13 ಜನ, ಕಾಂಗ್ರೆಸ್‌ನಿಂದ 7 ಜನ, ಜೆಡಿಎಸ್‌ನಿಂದ 1, ಪಕ್ಷೇತರರು 2 ಜನ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಬಿಜೆಪಿಯಲ್ಲಿ ಬಹುಮತ ಇರುವುದರಿಂದ ಬಿಜೆಪಿಗೆ ಅಧ್ಯಕ್ಷೆಗಿರಿ ಕಟ್ಟಿಟ್ಟ ಬುತ್ತಿ, ಆದರೂ ಯಾರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಬಿಜೆಪಿ ಮುಖಂಡರು ಗೊಂದಲದಲ್ಲಿದ್ದಾರೆ.ಬಿಜೆಪಿಯಲ್ಲಿ 2ನೇ ವಾರ್ಡ್‌ನ ಯಮನವ್ವ ಲಮಾಣಿ, 6ನೇ ವಾರ್ಡ್‌ನ ಲೀಲಾ ಸಿಂತ್ರೆ, 10ನೇ ವಾರ್ಡ್‌ನ ಮಹಾನಂದ ಗುಡ್ಡದ, 12ನೇ ವಾರ್ಡ್‌ನ ಶೋಭಾ ನೇಮದಿ, 16ನೇ ವಾರ್ಡ್‌ನ ವಿಜಯಲಕ್ಷ್ಮೀ ಮ್ಯಾಗಾಡಿ ಇವರು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ.ಮುಖಂಡರ ಸಂಭವನೀಯ ಪಟ್ಟಿಯಲ್ಲಿ ಯಮನವ್ವ ಲಮಾಣಿ, ಲೀಲಾ ಸಿಂತ್ರೆ, ಮಹಾನಂದ ಗುಡ್ಡದ ಅವರ ಹೆಸರು ಕೇಳಿ ಬರುತ್ತಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಇಲ್ಲ, 9ನೇ ವಾರ್ಡ್‌ನಿಂದ ಆಯ್ಕೆಯಾದ ಕಾಂಗ್ರೆಸ್ ಪರಿಶಿಷ್ಟ ಜಾತಿಯ ಮಹಿಳಾ ಅಭ್ಯರ್ಥಿ ಕಮಲವ್ವ ಮಾಗುಂಡಪ್ಪ ದಂಡಿನ ಉಪಾಧ್ಯಕ್ಷರಾಗುವುದು ಖಚಿತ, ಬಹುಮತ ಹೊಂದಿದ ಬಿಜೆಪಿಯಲ್ಲಿನ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.ಚುನಾವಣೆ: ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಇದೇ 12ರಂದು ನಡೆಯಲಿದೆ. ಮಧ್ಯಾಹ್ನ 12ಕ್ಕೆ ನಾಮ ನಿರ್ದೇಶನ ಪತ್ರ ಸಲ್ಲಿಸುವ ಅವಧಿ, ಮಧ್ಯಾಹ್ನ 2 ಕ್ಕೆ ನಾಮ ಪತ್ರ ಪರಿಶೀಲನೆ, 10 ನಿಮಿಷಗಳ ಕಾಲಾವಧಿಯಲ್ಲಿ ನಾಮ ನಿರ್ದೇಶನ ಪತ್ರಗಳನ್ನು ಹಿಂತೆಗೆದುಕೊಳ್ಳುವುದು, ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಮಧ್ಯಾಹ್ನ 2,11 ಗಂಟೆಗೆ ನಡೆಸಲಾಗುವುದು ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಅಜೀಜ ದೇಸಾಯಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry