ಮಂಗಳವಾರ, ನವೆಂಬರ್ 19, 2019
23 °C

`ಗುಳ್ಳೆ ನರಿ' ನಾಳೆ ಪ್ರದರ್ಶನ

Published:
Updated:

ರಂಗಭೂಮಿಗೆ ಹೊಸ ಪ್ರಯೋಗಗಳನ್ನು ಪರಿಚಯಿಸುವ ಪ್ರಯತ್ನದಲ್ಲಿರುವ ಪ್ರದರ್ಶನ ಕಲಾ ಸಂಸ್ಥೆಯು ಕೆಂಗಲ್ ಹನುಮಂತಯ್ಯ ಕಲಾ ಸೌಧದ ಸಹಯೋಗದಲ್ಲಿ ಭಾನುವಾರ (ಏ.21) `ಗುಳ್ಳೆ ನರಿ' ನಾಟಕ ಪ್ರದರ್ಶಿಸಲಿದೆ.ಶ್ರಿನಿವಾಸ ಪ್ರಭು ಅವರು ರಚಿಸಿರುವ ವಿಡಂಬನಾತ್ಮಕ ನಾಟಕ ಇದಾಗಿದ್ದು ಸಮಾಜದ ಪ್ರಸಕ್ತ ಜೀವನಶೈಲಿಗೆ ಅನುಗುಣವಾದ ಪಿಡುಗುಗಳಿಗೆ ಕನ್ನಡಿ ಹಿಡಿಯುತ್ತದೆ. ಅನ್ಯಭಾಷಾ ಪ್ರಯೋಗವಿಲ್ಲದ ಶುದ್ಧ ಕನ್ನಡದ ನಾಟಕವಾಗಿ ಇದು ಮೂಡಿಬಂದಿರುವುದು ವಿಶೇಷ. ರಂಗದ ಮೇಲೆ ಕತ್ತಲು ಆವರಿಸಿಕೊಳ್ಳದಿರುವಂತೆ ಬೆಳಕಿನ ಸಂಯೋಜನೆ ಮಾಡಿರುವುದು ಮತ್ತೊಂದು ಆಕರ್ಷಣೆ.ಪಿ.ಡಿ. ಸತೀಶ್‌ಚಂದ್ರ ನಿರ್ದೇಶನದ ಈ ನಾಟಕಕ್ಕೆ ಸುಗಮ ಸಂಗೀತಗಾರ ಉಪಾಸನಾ ಮೋಹನ್ ಸಂಗೀತ ನೀಡಿದ್ದಾರೆ.

ಸ್ಥಳ: ಕೆಂಗಲ್ ಹನುಮಂತಯ್ಯ ಕಲಾಸೌಧ, ರಾಮಾಂಜನೇಯ ದೇವಸ್ಥಾನದ ಆವರಣ, ಹನುಮಂತನಗರ.

ಸಂಪರ್ಕಕ್ಕೆ: 72599 98222/333 ಅಥವಾ ಟ್ಟಞಠ್ಟ್ಠಿಠಿ.ಟ್ಟಜ/ಜ್ಞ. ಸಂಜೆ 7.30.

ಪ್ರತಿಕ್ರಿಯಿಸಿ (+)