ಭಾನುವಾರ, ಮಾರ್ಚ್ 7, 2021
30 °C

ಗೂಗಲ್‌ನಿಂದ ‘ವಿಡಿಯೊ ಕಾಲಿಂಗ್’ ಆ್ಯಪ್ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೂಗಲ್‌ನಿಂದ ‘ವಿಡಿಯೊ ಕಾಲಿಂಗ್’ ಆ್ಯಪ್ ಬಿಡುಗಡೆ

ಸ್ಯಾನ್ ಫ್ರಾನ್ಸಿಸ್ಕೊ (ಎಪಿ): ಚಾಟಿಂಗ್‌ಗೆ ಬಳಕೆಯಾಗುತ್ತಿರುವ ಆ್ಯಪಲ್‌ನ ಫೇಸ್‌ಟೈಮ್, ಮೈಕ್ರೊಸಾಫ್ಟ್‌ನ ಸ್ಕೈಪ್‌, ಫೇಸ್‌ಬುಕ್‌ನ ಮೆಸೆಂಜರ್‌ಗಳ ಸಾಲಿಗೆ ಗೂಗಲ್‌ನ ‘ಡ್ಯೂ’ ಎಂಬ ವಿಡಿಯೊ ಚಾಟಿಂಗ್ ಆ್ಯಪ್  ಸೇರ್ಪಡೆಯಾಗಿದೆ. ಇದು ಭಾರತದಲ್ಲಿ ಇನ್ನೂ ಬಿಡುಗಡೆಯಾಗಿಲ್ಲ.ಡ್ಯೂ, ಇತರ ವಿಡಿಯೊ ಚಾಟಿಂಗ್‌ ಆ್ಯಪ್‌ಗಳಿಗಿಂತ ಭಿನ್ನವೇನಲ್ಲ. ಆದರೆ ಯಾರು ಕರೆ ಮಾಡುತ್ತಿದ್ದಾರೆ ಹಾಗೂ ಕರೆ ಸ್ವೀಕರಿಸಬೇಕೇ ಬೇಡವೇ ಎಂಬ ಆಯ್ಕೆಯನ್ನು ಇದು ಒದಗಿಸುತ್ತದೆ. ಈ ಹೊಸ ಆಯ್ಕೆಯನ್ನೇ  “Knock, knock” ಎಂದು ಕರೆದಿದೆ.ಮಂಗಳವಾರ ಈ ಹೊಸ ಆ್ಯಪ್ ಬಿಡುಗಡೆಯಾಯಿತು. ಮೇ ತಿಂಗಳಲ್ಲಿ ಇದನ್ನು ಘೋಷಿಸಲಾಗಿತ್ತು. ಗೂಗಲ್‌ನ ಆಂಡ್ರಾಯ್ಡ್ ಹಾಗೂ ಆ್ಯಪಲ್‌ನ ಐಫೋನ್‌ ಬಳಕೆದಾರರಿಗೆ ಇದು ಉಚಿತವಾಗಿ ಲಭ್ಯವಿದೆ.ಐಫೋನ್‌ ಫೇಸ್‌ಟೈಮ್ ರೀತಿಯಲ್ಲೇ ಇದು ಒಬ್ಬ ಬಳಕೆದಾರನ ಸಂಪರ್ಕ ಸಂಖ್ಯೆಯನ್ನು ಮಾತ್ರ ಕೇಳುತ್ತದೆ. ಉಳಿದ ವಿಡಿಯೊ ಕಾಲಿಂಗ್ ಸೇವೆಗಳು ಎರಡೂ ಕಡೆಯವರ ಲಾಗಿನ್ ಖಾತೆಗಳನ್ನು ಕೇಳುತ್ತವೆ.ಹ್ಯಾಂಗ್‌ಔಟ್ ಮೂಲಕ ಗೂಗಲ್‌ ಕಂಪೆನಿಯು ಹಲವು ವರ್ಷಗಳಿಂದ ವಿಡಿಯೊ ಕಾಲಿಂಗ್ ಸೌಲಭ್ಯ ಒದಗಿಸುತ್ತಿದ್ದರೂ, ಇದಕ್ಕಾಗಿಯೇ ಈ ಬಾರಿ ಪ್ರತ್ಯೇಕ  ಆ್ಯಪ್ ಅಭಿವೃದ್ಧಿಪಡಿಸಿದೆ. ‘ಅಲ್ಲೊ’ ಎಂಬ ಮತ್ತೊಂದು ಚಾಟಿಂಗ್ ಆ್ಯಪ್‌ ಅನ್ನೂ ಗೂಗಲ್‌ ಅಭಿವೃದ್ಧಿಪಡಿಸುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.