ಮಂಗಳವಾರ, ಏಪ್ರಿಲ್ 13, 2021
31 °C

ಗೂಡು ಕಟ್ಟುವವರೇ ಗಮನಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನೆ ಅಂಗಳದಲ್ಲಿ ಗುಚ್ಛವಾಗಿ ಬೆಳೆಯುವ ನಾಲ್ಕಾರು ಹೂವಿನ ಗಿಡ (ಉದಾಹರಣೆಗೆ ದಾಸವಾಳ) ನೆಡಿ. ಕಾರ್ಬೋಹೈಡ್ರೇಟ್ ಹೆಚ್ಚಿರುವ ಗಿಡಗಳಿಗೆ ಇರುವೆ ಮುತ್ತುವುದು ಸಾಮಾನ್ಯ. ಹಾಗಾಗಿ, ಕರಿಬೇವು, ನಿಂಬೆಹಣ್ಣು, ಚೆರ್ರಿ ಗಿಡ (ಲಾಭ ಎರಡು!) ಅಥವಾ ಬೇಲಿಗೆ ತೂಗು ಹಾಕಿ. ಗೂಡಿಗೆ ಒಂದು ಹಿಡಿ ಕಾಳು ಹಾಕಿ ಇಡಿ. ಆ ಪದಾರ್ಥಗಳಿಗೆ ಇರುವೆ ಮುತ್ತದಂತೆ ಜಾಗ್ರತೆ ವಹಿಸಿ.ಗಿಡದ ಬುಡದಲ್ಲಿ ಅಥವಾ ಮನೆ ಅಂಗಳದಲ್ಲಿ ಬಾನಿ, ಹೊಂಡ ಅಥವಾ ಮನೆಯ ತಾರಸಿಯ ಮೇಲೆ ಅಗಲವಾದ ಬಾಯಿಯಿರುವ ಮಣ್ಣಿನ ಕುಡಿಕೆಗಳಲ್ಲಿ ನೀರು ತುಂಬಿಸಿಡಿ. ಬೇಸಿಗೆಯಲ್ಲಿ ಅವುಗಳಿಗೆ ಜೀವ ಬಂದಂತಾಗುತ್ತದೆ. ಮನೆಯ ಸುತ್ತಲೂ ಬಿದರಿನ ಬುಟ್ಟಿ, ಮಣ್ಣಿನ ಪಕ್ಷಿ ಮನೆಗಳನ್ನು ಅಥವಾ ತಗಡಿನ ಡಬ್ಬಿಗಳನ್ನು ಕಟ್ಟಿ, ತುಸು ಭತ್ತದ ಹುಲ್ಲು ಹಾಸಿ. ಈ ಎಲ್ಲ ಕೆಲಸಕ್ಕೆ ಮಕ್ಕಳನ್ನು ಪ್ರೋತ್ಸಾಹಿಸಿ!ತರಕಾರಿ, ಹೂವು, ಹಣ್ಣಿನ ಗಿಡಗಳಿರುವ ಕೈತೋಟದ ಸಮೀಪದಲ್ಲಿ ಗೂಡು ಕಟ್ಟಿ. ಇದರಿಂದ ಕೈತೋಟಕ್ಕೆ ದಾಳಿಯಿಡುವ ಕೀಟ, ಹುಳುಗಳನ್ನು ಗುಬ್ಬಚ್ಚಿ ಭಕ್ಷಿಸುತ್ತದೆ. ಇದರಿಂದ ಗುಬ್ಬಚ್ಚಿಗೆ ಆಹಾರ ಪೂರೈಕೆಯ ಶ್ರಮ ತುಸು ತಪ್ಪೀತು. ಇನ್ನೊಂದೆಡೆ ಗುಬ್ಬಚ್ಚಿ ಪೋಷಣೆಯಿಂದ ನಮ್ಮ ಕೈತೋಟ ಕೀಟ ಮುಕ್ತವಾಗಿರುತ್ತದೆ. ಈ ಕ್ರಿಮಿಕೀಟಗಳ ನಿಯಂತ್ರಣಕ್ಕೆ ಔಷಧ ಸಿಂಪಡಿಸುವ ಅಗತ್ಯ ಬೀಳುವುದಿಲ್ಲ. ಪರೋಕ್ಷವಾಗಿ ಸಾವಯವ ಆಹಾರ ಸೇವಿಸುವ ಭಾಗ್ಯ ನಮ್ಮದಾಗುತ್ತದೆ.ಬೊಂಬಾಟ್ ಪ್ರತಿಕ್ರಿಯೆ: ಕಾರ್ಯಕ್ರಮ ಆರಂಭದ ಮೊದಲ ನಾಲ್ಕು ದಿನದಲ್ಲಿ ಮೂರೂವರೆ ಸಾವಿರ ಜನರು ಗುಬ್ಬಿ ಗೂಡುಗಳನ್ನು ಪಡೆದಿದ್ದಾರೆ. 500 ಶಾಲೆಗಳು ಗೂಡುಗಳನ್ನು ಪಡೆದು, ತಮ್ಮ ಶಾಲಾ ಆವರಣದಲ್ಲಿ ತೂಗು ಹಾಕಿವೆ. ‘ಗುಬ್ಬಿ ಸಂತತಿ ಹೆಚ್ಚಿಸುವ ನಮ್ಮ ಪ್ರಯತ್ನಕ್ಕೆ ಅಭೂತಪೂರ್ವ ಆರಂಭ ದೊರೆತಿದೆ. ಇದೇ ವೇಗ ನಿರಂತರವಾಗಿದ್ದರೆ ಕೆಲವೇ ವರ್ಷಗಳಲ್ಲಿ ಗುಬ್ಬಿ ಸಂತತಿ ವಿಸ್ತರಣೆಯಾಗುವುದರಲ್ಲಿ ಸಂದೇಹವೇ ಇಲ್ಲ’ ಎನ್ನುತ್ತಾರೆ ಗೂಡು ವಿತರಣೆಯ ಜವಾಬ್ದಾರಿ ಹೊತ್ತಿರುವ ಪ್ರತಿಷ್ಠಾನದ ಹರೀಶ್.ಮಾಹಿತಿ ತಂತ್ರಜ್ಞಾನದ ಪ್ರಮುಖ ಕಂಪೆನಿ ವಿಪ್ರೊ ಕೂಡ ಗುಬ್ಬಿ ರಕ್ಷಣೆಯಲ್ಲಿ ಕೈಜೋಡಿಸಿದೆ. ಇದರ ಎಲೆಕ್ಟ್ರಾನಿಕ್ ಸಿಟಿಯಲ್ಲಿನ ತನ್ನ ಕಚೇರಿಯಲ್ಲಿ ಕಾರ್ಯಾಗಾರ ಏರ್ಪಡಿಸಿತ್ತು. ಪಕ್ಷಿ ತಜ್ಞ ಮೊಹ್ಮದ್ ದಿಲಾವರ್, ಎಲ್. ಶ್ಯಾಮಲ್, ಇಕೊ ಎಸ್‌ವೈಎಸ್ ಆ್ಯಕ್ಷನ್ ಪ್ರತಿಷ್ಠಾನದ ಸಂಸ್ಥಾಪಕ ಕ್ರಿಶ್ಚಿಯನ್ ಪಿಲ್ಲರ್ಡ್ ಅವರಿಂದ ಪರಿಸರ ಸಮತೋಲನ, ಗುಬ್ಬಿ ರಕ್ಷಣೆಯ ಮಹತ್ವದ ಬಗ್ಗೆ ಪ್ರಾತ್ಯಕ್ಷಿಕೆ, ಉಪನ್ಯಾಸ ಇತ್ತು. ಜೀವವೈವಿಧ್ಯ ಕುರಿತ ಛಾಯಾಗ್ರಾಹಕರು ಮತ್ತು ಗುಬ್ಬಿ ರಕ್ಷಣೆಯಲ್ಲಿ ತೊಡಗಿಸಿಕೊಂಡವರನ್ನು ಸನ್ಮಾನಿಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.