ಬುಧವಾರ, ಅಕ್ಟೋಬರ್ 16, 2019
22 °C

ಗೃಹಭಂಗದ ಗಂಗಮ್ಮ

Published:
Updated:

`ದೇಶಕ್ಕೆ ಸ್ವಾತಂತ್ರ್ಯ ದೊರಕಿದ್ದು, ಗಾಂಧೀಜಿ  ಮತ್ತು ಕಾಂಗ್ರೆಸ್‌ನಿಂದಲ್ಲ, ನೇತಾಜಿ ಸುಭಾಷ್ ಚಂದ್ರಬೋಸ್  ಅವರ  ಭಾರತೀಯ ರಾಷ್ಟ್ರೀಯ ಸೇನೆಯಿಂದ..~ ಎಂದು  ಎಸ್.ಎಲ್.ಭೈರಪ್ಪನವರು  ಪ್ರತಿಪಾದಿಸಿದ್ದಾರೆಂದು ವರದಿಯಾಗಿದೆ (ಪ್ರವಾ. ಜ.1).ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಗಾಂಧೀಜಿ, ನೇತಾಜಿ, ಕಾಂಗ್ರೆಸ್, ಭಾರತೀಯ ರಾಷ್ಟ್ರೀಯ ಸೇನೆ ಮತ್ತು ಇನ್ನಿತರ ಲಕ್ಷಾಂತರ  ಮಂದಿ ಭಾರತೀಯರ ಹಾಗೂ ನೂರಾರು ಸಂಘಟನೆಗಳ ಸಾಮೂಹಿಕ ಹೋರಾಟದಿಂದ ಎಂಬ ವಿಚಾರ ದೇಶದ ಸ್ವಾತಂತ್ರ್ಯಕ್ಕಾಗಿ ನಡೆದಿರುವ ಸುಮಾರು ಒಂದು ನೂರು ವರ್ಷ ಕಾಲದ ಹೋರಾಟದ ಕಥನವನ್ನು ಓದಿದವರೆಲ್ಲರಿಗೂ ಮನದಟ್ಟಾಗುತ್ತದೆ.

ಆದರೆ ಭೈರಪ್ಪನವರು ಇದೀಗ ಗಾಂಧೀಜಿ  ಬಗ್ಗೆ ವಿಷ ಕಾರುತ್ತಿರುವುದನ್ನು ನೋಡುತ್ತಿದ್ದಂತೆಯೇ ಅವರ `ಗೃಹಭಂಗ~ ಕಾದಂಬರಿಯ ಪಾತ್ರ ಗಂಗಮ್ಮ ನೆನಪಾದಳು.

 

ಮಕ್ಕಳು, ಸೊಸೆಯರು ಮತ್ತು ತನ್ನ ಸುತ್ತಮುತ್ತಣ ಎಲ್ಲದರ  ಮೇಲೂ ವಿನಾ ಕಾರಣ  ಕೆಟ್ಟಮಾತುಗಳನ್ನೇ ಆಡುತ್ತ, ಎಲ್ಲರ ಮನಸ್ಸುಗಳಿಗೆ  ಆತಂಕವನ್ನುಂಟು ಮಾಡುತ್ತಿದ್ದ ಅವಳೇ  ಭೈರಪ್ಪನವರೇನೋ ಎನಿಸಿತು.  

 

Post Comments (+)