ಸೋಮವಾರ, ಜನವರಿ 20, 2020
22 °C

ಗೃಹರಕ್ಷಕ ದಳದ ಸೇವೆ ಶ್ಲಾಘನೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಗಲಭೆ, ಆಂತರಿಕ ಭದ್ರತೆ ವಿಷಯದಲ್ಲಿ ಗೃಹರಕ್ಷಕ ದಳ ನಿರ್ವಹಿ­ಸುವ ನಿಸ್ವಾರ್ಥ ಸೇವೆ ಪೊಲೀಸರಿಗಿಂತ ಉತ್ತಮವಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಮಣ್‌ಗುಪ್ತಾ ತಿಳಿಸಿದರು. ನಗರದ ಮಹಾತ್ಮ ಗಾಂಧಿ ಕ್ರೀಡಾಂ­ಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗೃಹ ರಕ್ಷಕ ದಳದ ಕೇಂದ್ರೀಯ ವಲಯ ಮಟ್ಟದ ಕ್ರೀಡಾಕೂಟ ಸಮಾ­ರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ­ದರು.ಗೃಹ ರಕ್ಷಕ ದಳದಲ್ಲಿ ರೈಫಲ್‌ ಶೂಟಿಂಗ್‌, ಫೈರ್‌ ಫೈಟಿಂಗ್‌ನಂತಹ ವೃತ್ತಿಪರ ಕ್ರೀಡೆಗಳ ತರಬೇತಿ ನೀಡು­ತ್ತಿರುವುದು ಉತ್ತಮ ಬೆಳವಣಿಗೆ ಎಂದರು. ತುಮುಲ್‌ ಅಧ್ಯಕ್ಷ ಕೊಂಡ­ವಾಡಿ ಚಂದ್ರಶೇಖರ್‌ ಮಾತನಾಡಿದರು. ಅಂತಿಮ ಸುತ್ತಿನ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಚಿಕ್ಕಬಳ್ಳಾಪುರ ತಂಡವು ಬೆಂಗಳೂರು ನಗರ ತಂಡವನ್ನು ಸೋಲಿಸಿ, ಪ್ರಶಸ್ತಿಗೆ ಭಾಜನವಾ­ಯಿತು.

ವಿವಿಧ ಸ್ಪರ್ಧೆಗಳಲ್ಲಿ ಭಾಗ­ವಹಿ­ಸಿದ ವಿಜೇತರಾದ ಏಳು ಜಿಲ್ಲೆಗಳ ಗೃಹರಕ್ಷಕ ದಳದ ಸಿಬ್ಬಂದಿಗೆ ಬಹುಮಾನ ವಿತರಿಸಲಾಯಿತು. ಕೊಂಡ­ವಾಡಿ ಚಂದ್ರಶೇಖರ್‌ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ರಮಣ್‌­ಗುಪ್ತಾ ಅವರನ್ನು ಗೃಹರಕ್ಷಕ ದಳದ ಪರವಾಗಿ ಅಭಿನಂದಿಸಲಾಯಿತು.

ಸಮಾರಂಭದಲ್ಲಿ ಜಿಲ್ಲಾ ಗೃಹ­ರಕ್ಷಕ ದಳ ಸಮಾದೇಷ್ಟ ಕೆ.ರವಿ­ಕುಮಾರ್‌, ಉಪಸಮಾದೇಷ್ಟ ಪಿ.ಎ.­ನಾಗರಾಜರಾವ್‌ ಇತರರು ಇದ್ದರು.

ಪ್ರತಿಕ್ರಿಯಿಸಿ (+)