ಗೃಹಸಚಿವ ಶಿಂಧೆ ಸ್ವಾಗತ

7

ಗೃಹಸಚಿವ ಶಿಂಧೆ ಸ್ವಾಗತ

Published:
Updated:

ಮುಂಬೈ (ಪಿಟಿಐ): ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿರುವುದನ್ನು ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ ಶ್ಲಾಘಿಸಿದ್ದಾರೆ.‘ಇದು ಅತಿ ಅಪರೂಪದಲ್ಲಿ ಅಪರೂಪ  ಪ್ರಕರಣವಾಗಿತ್ತು. ಬರ್ಬರ­ವಾಗಿ ಅತ್ಯಾಚಾರಕ್ಕೊಳಗಾಗಿ  ಪ್ರಾಣ­ಕಳೆದು­ಕೊಂಡ ಯುವತಿ ಹಾಗೂ ಆಕೆಯ ಕುಟುಂಬಕ್ಕೆ ನ್ಯಾಯ ದೊರಕಿ­ದಂತಾಗಿದೆ. ನಾನು ತೀರ್ಪನ್ನು ಸ್ವಾಗತಿ­ಸು­ತ್ತೇನೆ’ ಎಂದು ಶಿಂಧೆ ಸುದ್ದಿಗಾರರಿಗೆ ತಿಳಿಸಿದರು.‘ಮರಣದಂಡನೆ ವಿಧಿಸುವ ಮೂಲಕ   ಇಂತಹ ಪೈಶಾಚಿಕ ಕೃತ್ಯ ದಲ್ಲಿ ತೊಡಗಿದ­ವ­ರಿಗೆ ಕಠಿಣ ಶಿಕ್ಷೆಯಾಗುತ್ತದೆ ಎಂಬು­ದನ್ನು ‘ನ್ಯಾಯ ದೇವತೆ’ ತೋರಿಸಿ­ಕೊಟ್ಟಿ­ದ್ದಾಳೆ’ ಎಂದು ಸಚಿವರು ಹೇಳಿದರು.‘ಈ ಘಟನೆ ನಡೆದ ಬಳಿಕ ದೇಶದಲ್ಲಿ ಎಂತಹ ವಾತಾವರಣ ಸೃಷ್ಟಿಯಾಗಿತ್ತು ಎಂದರೆ, ಇಂತಹ ಶಿಕ್ಷೆಯನ್ನು ನಾವು  ನಿರೀಕ್ಷಿಸಿದ್ದೆವು’ ಎಂದೂ ಅವರು ಹೇಳಿದರು.ರಾಜಕೀಯ ಒತ್ತಡದಿಂದ ಈ ತೀರ್ಪು ಹೊರಬಿದ್ದಿದೆ ಎಂಬ ಪ್ರತಿವಾದಿ ವಕೀಲ ಎ.ಪಿ. ಸಿಂಗ್‌ ಅವರ ಹೇಳಿಕೆಗೆ ಪ್ರತಿ­ಕ್ರಿಯಿ­ಸಿದ ಶಿಂಧೆ, ನ್ಯಾಯಾಂಗವು ಕಾನೂನಿನ ಆಧಾರದಲ್ಲಿ ಕಾಯ­ರ್ನಿ­ವರ್ಹಿಸು­ತ್ತ­ದೆಯೇ ಹೊರತು ರಾಜಕೀಯ ಒತ್ತಡದಿಂದಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry