ಗೃಹಸ್ಥಾಶ್ರಮಕ್ಕೆ ಫೇಸ್‌ಬುಕ್ ಸಿಇಒ

7

ಗೃಹಸ್ಥಾಶ್ರಮಕ್ಕೆ ಫೇಸ್‌ಬುಕ್ ಸಿಇಒ

Published:
Updated:

ವಾಷಿಂಗ್ಟನ್ (ಐಎಎನ್‌ಎಸ್): ಖ್ಯಾತ ಸಾಮಾಜಿಕ ಜಾಲ ತಾಣ ಫೇಸ್‌ಬುಕ್‌ನಲ್ಲಿ ತಾಣದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಜುಕರ್‌ಬರ್ಗ್ ಅವರ ವೈವಾಹಿಕ ಸ್ಥಿತಿ (ಮ್ಯಾರಿಟಲ್ ಸ್ಟೇಟಸ್) ಬದಲಾಗಿದೆ!ಫೇಸ್‌ಬುಕ್‌ನ ಸಹ ಸಂಸ್ಥಾಪಕರಾಗಿರುವ ಜುಕರ್‌ಬರ್ಗ್ ತಮ್ಮ ದೀರ್ಘಕಾಲದ ಗೆಳತಿ ಪ್ರಿಸಿಲ್ಲಾ ಚಾನ್ ಅವರನ್ನು ವರಿಸಿದ್ದಾರೆ.  ತಾವು ಪ್ರಿಸಿಲ್ಲಾ ಚಾನ್ ಅವರನ್ನು ಮದುವೆಯಾಗಿರುವುದಾಗಿ ಮಾರ್ಕ್ ಜುಕರ್‌ಬರ್ಗ್, ಮೇ 19ರಂದು ಫೇಸ್‌ಬುಕ್‌ನ ತಮ್ಮ ಟೈಮ್‌ಲೈನ್‌ನಲ್ಲಿ ಬರೆದುಕೊಂಡಿದ್ದಾರೆ.ಕ್ಯಾಲಿಫೋರ್ನಿಯಾದ ಪಾಲೊ ಅಲ್ಟೊದಲ್ಲಿರುವ ಜುಕರ್‌ಬರ್ಗ್ ನಿವಾಸದಲ್ಲಿ ಯುವ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ.ಪ್ರಿಸಿಲ್ಲಾ ಚಾನ್ ಅವರೊಂದಿಗೆ ತೆಗೆಸಿಕೊಂಡಿರುವ ಛಾಯಾಚಿತ್ರವನ್ನು 28 ವರ್ಷದ ಜುಕರ್‌ಬರ್ಗ್ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಚೀನಾ ಮೂಲದ ಅಮೆರಿಕನ್ ಪ್ರಜೆಯಾಗಿರುವ ಚಾನ್ ಹಾರ್ವರ್ಡ್‌ನಲ್ಲಿ ಜುಕರ್‌ಬರ್ಗ್ ಅವರನ್ನು ಭೇಟಿಯಾಗಿದ್ದರು. 9 ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry