ಗೃಹೋಪಯೋಗಿ ಸಲಕರಣೆ ಮಾರುಕಟ್ಟೆ ಹ್ಯಾವೆಲ್ಸ್ ಪ್ರವೇಶ

7

ಗೃಹೋಪಯೋಗಿ ಸಲಕರಣೆ ಮಾರುಕಟ್ಟೆ ಹ್ಯಾವೆಲ್ಸ್ ಪ್ರವೇಶ

Published:
Updated:

ಬೆಂಗಳೂರು: ವಿದ್ಯುತ್ ಸಲಕರಣೆ ಮತ್ತು ಎಲೆಕ್ಟ್ರಾನಿಕ್ಸ್ ತಯಾರಿಕಾ ಸಂಸ್ಥೆ ಹ್ಯಾವೆಲ್ಸ್ ಇಂಡಿಯಾ ಲಿಮಿಟೆಡ್, ಈಗ ರಾಜ್ಯದಲ್ಲಿ ಗೃಹೋಪಯೋಗಿ ಸಲಕರಣೆ ವಹಿವಾಟು ಪ್ರವೇಶಿಸಲು ನಿರ್ಧರಿಸಿದೆ.ರಾಜ್ಯದಲ್ಲಿ ಗೃಹೋಪಯೋಗಿ ಸಲಕರಣೆಗಳ  ಮಾರುಕಟ್ಟೆಯಲ್ಲಿ  ವಹಿವಾಟು ವಿಸ್ತರಿಸಲು ವಿಪುಲ ಅವಕಾಶಗಳು ಇವೆ. ಮುಂದಿನ ಹಣಕಾಸು ವರ್ಷದಲ್ಲಿ ರೂ 250 ಕೋಟಿಗಳಷ್ಟು ವಹಿವಾಟು ನಡೆಸುವ ಗುರಿ ನಿಗದಿಪಡಿಸಲಾಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಜ್ಯೋತಿಶ್ ಕುಮಾರ್, ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಎಲೆಕ್ಟ್ರಿಕಲ್ ಮತ್ತು ಗೃಹೋಪಯೋಗಿ ಸಲಕರಣೆಗಳಿಗೆ ರಾಜ್ಯದ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ವಹಿವಾಟು ಶೇ 30ರಷ್ಟು ವೃದ್ಧಿ ಕಾಣುತ್ತಿದೆ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry