ಮಂಗಳವಾರ, ನವೆಂಬರ್ 19, 2019
26 °C

`ಗೃಹ ಫೈನಾನ್ಸ್' ನಿವ್ವಳ ಲಾಭ ರೂ.146 ಕೋಟಿ

Published:
Updated:

ಬೆಂಗಳೂರು: ಅಹಮದಾಬಾದ್‌ನ `ಗೃಹ ಫೈನಾನ್ಸ್ ಲಿ.' 2012-13ನೇ ಹಣಕಾಸು ವರ್ಷದಲ್ಲಿ ರೂ.145.88 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಲಾಭ ರೂ.120.34 ಕೋಟಿಗೆ ಹೋಲಿಸಿದರೆ ಶೇ 21ರ ಪ್ರಗತಿಯಾಗಿದೆ.ಬಡ್ಡಿ ಗಳಿಕೆ ಪ್ರಮಾಣ ರೂ.217.75 ಕೋಟಿಗೆ(ಶೇ 22) ಹೆಚ್ಚಿದೆ. ಪ್ರತಿಷೇರಿಗೆ ರೂ.2.50ರ ಲಾಭಾಂಶ ಘೋಷಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)