ಮಂಗಳವಾರ, ಮೇ 17, 2022
27 °C

ಗೃಹ ವಿಜ್ಞಾನ: ಆಯ್ಕೆ ಭಿನ್ನ, ಸಮೃದ್ಧ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಕಲಾ ವಿಭಾಗದಲ್ಲಿ ಪಿಯುಸಿ ಮುಗಿಸಿ ಅದೇ ಚರಿತ್ರೆ, ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ ಓದುವುದು ಬೇಸರ ಎಂದೆನಿಸಿದರೆ, ಅಥವಾ ಬೇರೇನಾದರು ಮಾಡಬೇಕು ಎಂಬ ಆಸಕ್ತಿ ಇದ್ದರೆ `ಹೋಮ್ ಸೈನ್ಸ್~ ಆಯ್ಕೆ ಮಾಡಿ ಕೊಳ್ಳಬಹುದು. ಅದಕ್ಕೆ ಹಾಸನದಲ್ಲೇ ಈಗ ಅವಕಾಶವಿದ್ದು, ಉತ್ತಮ ಭವಿಷ್ಯವೂ ಇದೆ.ಹೋಮ್ ಸೈನ್ಸ್ ಇಲ್ಲಿ ಒಂದು ವಿಷಯ ಅಷ್ಟೇ. ಬಿ.ಎ ಮಾಡುವವರೂ, ಬಿಎಸ್‌ಸಿ ಮಾಡುವವರೂ ಈ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಕಲಿಯಬಹುದು.ನಗರದ ಜೀವನ ಶೈಲಿ ಬದಲಾದಂತೆ ಜನರ ಯೋಚನೆ, ಅಗತ್ಯಗಳೂ ಬದಲಾಗಿವೆ. ಬರುವ ಆದಾಯದಲ್ಲಿ ಎಲ್ಲ ಬೇಡಿಕೆಗಳನ್ನು ಈಡೇರಿಸು ವುದು ಅಷ್ಟು ಸುಲಭದ ವಿಚಾರವಲ್ಲ. ಇಂಥ ಸನ್ನಿವೇಶದಲ್ಲಿ ಇರುವ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತ ಆಸಕ್ತಿ ಹಾಗೂ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಉಪಾಯ ಸಿಕ್ಕರೆ ಯಾರು ತಾನೆ ಇಷ್ಟಪಡಲ್ಲ. ಹೋಮ್ ಸೈನ್ಸ್‌ನ ಉದ್ದೇಶವೂ ಇದೆ ಆಗಿದೆ.ಮನೆ ಹೇಗಿದ್ದರೂ ನಡೆಯುತ್ತೆ, ಯಾವ ಸಾಮಗ್ರಿಯನ್ನು ಎಲ್ಲಿಟ್ಟರೂ ಅಡ್ಡಿಲ್ಲ ಎಂಬ ಧೋರಣೆ ಈಗ ಬದಲಾಗಿದೆ. ಹಳ್ಳಿಯ ಜನರೂ ಮನೆಯ ಸೌಂದರ್ಯ ಹಾಗೂ ಒಳಾಂಗಣ ವಿನ್ಯಾಸಗಳ ಬಗ್ಗೆ ಈಗ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಟಿ.ವಿ. ಎಲ್ಲಿಡಬೇಕು, ಸೋಫಾ ಯಾವ ದಿಕ್ಕಿನಲ್ಲಿಡಬೇಕು, ಹೂದಾನಿ ಎಷ್ಟಿರಬೇಕು.. ಹೀಗೆ ಸಣ್ಣ-ಪುಟ್ಟ ವಿಚಾರಗಳ ಬಗ್ಗೆಯೂ ಜನರು ವಿಶೇಷವಾಗಿ ಮಹಿಳೆಯರು ತಲೆಕೆಡಿಸಿಕೊಳ್ಳುತ್ತಾರೆ. ಹೋಮ್ ಸೈನ್ಸ್‌ನಲ್ಲಿ ಹೌಸ್ ಕೀಪಿಂಗ್ ಎಂಬ ವಿಷಯವೂ ಬರುವುದರಿಂದ ಈ ಬಗ್ಗೆ ಕಲಿಕೆಗೆ ಅವಕಾಶ ಲಭಿಸುತ್ತದೆ. ಮಕ್ಕಳ ಲಾಲನೆ-ಪಾಲನೆಯಿಂದ- ಅಡುಗೆ ಮಾಡುವುದರವರೆಗೆ ಎಲ್ಲ ವಿಚಾರಗಳೂ ಬರುತ್ತವೆ.ಬಿ.ಎ. ಯಂತೆಯೇ ಇಲ್ಲೂ ಪ್ರಮುಖವಾಗಿ ಮೂರು ಕಾಂಬಿನೇಶನ್‌ಗಳಿವೆ.

1. ಇಂಗ್ಲಿಷ್ (ಮೇಜರ್), ಮನಃಶಾಸ್ತ್ರ ಮತ್ತು ಎಫ್‌ಆರ್‌ಎಂ (ಫ್ಯಾಮಿಲಿ ರಿಸೋರ್ಸ್ ಮ್ಯಾನೇಜ್‌ಮೆಂಟ್)

2. ಎಚ್.ಡಿ (ಹ್ಯೂಮನ್  ರಿಸೋರ್ಸ್ ಡೆವಲಪ್‌ಮೆಂಟ್) ಸಮಾಜ ವಿಜ್ಞಾನ, ಹಾಗೂ ಅರ್ಥಶಾಸ್ತ್ರ.

3.ಕನ್ನಡ(ಮೇಜರ್) ಚರಿತ್ರೆ ಹಾಗೂ ಎಚ್.ಡಿ.ಹೋಮ್ ಸೈನ್ಸ್ ಜತೆಗೆ ಬಿಎಸ್‌ಸಿ ವಿಷಯ ಗಳನ್ನು ಆಯ್ಕೆ ಮಾಡಲು ಬಯಸುವವರಿಗೆ ಕ್ರಿಮಿನಾಲಜಿ, ಹೋಮ್ ಸೈನ್ಸ್ ಹಾಗೂ ಸೈಕಾಲಜಿ. ಎಚ್‌ಡಿ, ಎಫ್‌ಆರ್‌ಎಂ ಹಾಗೂ ಸೈಕಾಲಜಿ ಎಂಬ ಎರಡು ಕಾಂಬಿನೇಶನ್‌ಗಳಿವೆ. ಈ ವರ್ಷದಿಂದ ಕಾಲೇಜಿನಲ್ಲಿ ರಸಾಯನ ಶಾಸ್ತ್ರ, ಪ್ರಾಣಿಶಾಸ್ತ್ರ ಹಾಗೂ ಫುಡ್ ಆ್ಯಂಡ್ ನ್ಯೂಟ್ರೀಶಿಯನ್ ಎಂಬ ಹೊಸ ಕೋರ್ಸ್ ಆರಂಭಿಸಲಾಗುತ್ತಿದೆ.ಹಾಸನದಲ್ಲಿ ಗೃಹವಿಜ್ಞಾನ ಕಾಲೇಜು ಆರಂಭವಾಗಿ ಕೆಲವು ವರ್ಷಗಳಾಗಿದ್ದರೂ ಮಾಹಿತಿಯ ಕೊರತೆಯಿಂದ ಅಥವಾ ಉದ್ಯೋಗಾವಕಾಶದ ಅರಿವಿಲ್ಲದೆ ಹೆಚ್ಚು ವಿದ್ಯಾರ್ಥಿಗಳು ಇತ್ತ ಮುಖ ಮಾಡಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈ ವರೆಗೂ ವಿಜ್ಞಾನ ಕಾಲೇಜಿನಲ್ಲೇ ಗೃಹವಿಜ್ಞಾನ ಕಾಲೇಜಿನ ತರಗತಿಗಳು ನಡೆಯುತ್ತಿದ್ದವು. ಈಗ ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಾಣವಾಗಿದೆ. ಸಾಕಷ್ಟು ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ. ಬಿ.ಎ. ಗಿಂತಲೂ ಭಿನ್ನವಾಗಿ ಅಧ್ಯಯನ ಮಾಡಬೇಕೆಂಬ ಆಸಕ್ತಿಯುಳ್ಳವರು ಈ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು. ಸರ್ಕಾರಿ ಕಾಲೇಜು ಆಗಿರುವುದರಿಂದ ವಿ.ವಿ. ನಿಗದಿಮಾಡುವ ಶುಲ್ಕ ಮಾತ್ರ (ಸುಮಾರು ರೂ. 2500) ನೀಡಬೇಕಾಗುವುದು. ಹೆಚ್ಚಿನ ಮಾಹಿತಿಗೆ ಕಾಲೇಜಿನ ಪ್ರಾಂಶುಪಾಲ ಡಾ. ಕೃಷ್ಣೇಗೌಡ ಅವರನ್ನು (ದೂರವಾಣಿ: 9448561185) ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.