ಗೆಜೆಟ್‌ಯೇತರ ನೌಕರರಿಗೆ ರೂ 3,500 ಬೋನಸ್

7

ಗೆಜೆಟ್‌ಯೇತರ ನೌಕರರಿಗೆ ರೂ 3,500 ಬೋನಸ್

Published:
Updated:

ನವದೆಹಲಿ (ಪಿಟಿಐ): ಗೆಜೆಟ್‌ಯೇತರ ಕೇಂದ್ರ ಸರ್ಕಾರಿ ನೌಕರರಿಗೆ 2011-12ನೇ ಸಾಲಿನಲ್ಲಿ ಹಬ್ಬದ ಕೊಡುಗೆಯಾಗಿ 3,500 ರೂವರೆಗೆ ಬೋನಸ್ ಘೋಷಿಸಲಾಗಿದೆ.ಉತ್ಪಾದನೆಗೆ ಸಂಬಂಧಿಸಿದ ಯಾವುದೇ ಬೋನಸ್ ಯೋಜನೆಗೆ ಒಳಪಡದ `ಗ್ರೂಪ್ `ಸಿ~ ಮತ್ತು `ಡಿ~ ನೌಕರರು ಹಾಗೂ ಗ್ರೂಪ್ `ಬಿ~ಯ ಗೆಜೆಟೆಯೇತರ ನೌಕರರಿಗೆ ಒಂದು ತಿಂಗಳ ವೇತನದಷ್ಟು ಬೋನಸ್ ನೀಡಲಾಗುತ್ತದೆ~ ಎಂದು ಹಣಕಾಸು ಸಚಿವಾಲಯದ ಅಧಿಕೃತ ಪತ್ರದಲ್ಲಿ ತಿಳಿಸಲಾಗಿದೆ.ಕೇಂದ್ರ ಪೊಲೀಸ್, ಅರೆಸೇನಾ ಪಡೆ ಹಾಗೂ ಸಶಸ್ತ್ರ ಪಡೆ ಸಿಬ್ಬಂದಿಗೂ ಬೋನಸ್ ಸಿಗಲಿದೆ. 2012ರ ಮಾರ್ಚ್ 31ರ ವರೆಗೆ ಸೇವೆಯಲ್ಲಿದ್ದವರು ಹಾಗೂ 2011-12ನೇ ಸಾಲಿನಲ್ಲಿ ಕನಿಷ್ಠ 6 ತಿಂಗಳು ನಿರಂತರ ಸೇವೆಯಲ್ಲಿ ಮುಂದುವರಿದ ನೌಕರರು ಈ ಬೋನಸ್ ಪಡೆಯುವುದಕ್ಕೆ ಅರ್ಹರು.ಕೇಂದ್ರ ಸರ್ಕಾರವು ಕಳೆದ ತಿಂಗಳು 80 ಲಕ್ಷ ನೌಕರರು ಹಾಗೂ ಪಿಂಚಣಿದಾರರಿಗೆ ಶೇ 7ರಷ್ಟು ಡಿಎ ಹೆಚ್ಚಿಸಿತ್ತು. ಇದರಿಂದಾಗಿ ವಾರ್ಷಿಕವಾಗಿ ಬೊಕ್ಕಸಕ್ಕೆ  9,700 ಕೋಟಿ ರೂಪಾಯಿ ಹೊರೆ ಆಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry