ಗೆಡ್ಡೆ ಕರಗಿ ಹೋಗಿದೆ: ಯುವಿ

7

ಗೆಡ್ಡೆ ಕರಗಿ ಹೋಗಿದೆ: ಯುವಿ

Published:
Updated:

ನವದೆಹಲಿ (ಪಿಟಿಐ): ಶ್ವಾಸಕೋಶದ ನಡುವೆ ಆಗಿದ್ದ ಗೆಡ್ಡೆ `ಕರಗಿ ಹೋಗಿದೆ~ ಎಂದು ಅಮೆರಿಕಾದಲ್ಲಿ ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತಿರುವ ಯುವರಾಜ್ ಸಿಂಗ್ ಅವರು ಹೇಳಿಕೊಂಡಿದ್ದಾರೆ.`ಟ್ವಿಟರ್~ನಲ್ಲಿ ಸಂದೇಶ ಹರಿಬಿಟ್ಟಿರುವ `ಯುವಿ~ ಗುರುವಾರ ಈ ಸಂತಸವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. `ವೈದ್ಯರಾದ ಲಾರೆನ್ಸ್ ಆರ್ಮ್‌ಸ್ಟ್ರಾಂಗ್ ಅವರಿಂದ ಒಳ್ಳೆಯ ಸುದ್ದಿ ಕೇಳಿದೆ. ಮೊದಲ ಸುತ್ತಿನ ಚಿಕಿತ್ಸೆಯ ವರದಿಯನ್ನು ಪರಿಶೀಲಿಸಿದ ನಂತರ ಗೆಡ್ಡೆ ಸಂಪೂರ್ಣವಾಗಿ ಹೋಗಿದೆ ಎನ್ನುವುದನ್ನು ಖಚಿತಪಡಿಸಿದರು. ಈಗ ಎರಡನೇ ಸುತ್ತಿನ ಚಿಕಿತ್ಸೆ ಆರಂಭವಾಗಿದೆ~ ಎಂದು ಬರೆದಿದ್ದಾರೆ.ಬೋಸ್ಟನ್ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯಲ್ಲಿ ಯುವರಾಜ್ ಚಿಕಿತ್ಸೆ ಮುಂದುವರಿದಿದೆ. ಅಲ್ಲಿಂದಲೇ ಅವರು ತಮ್ಮ ಚೇತರಿಕೆಯ ಖುಶಿಯನ್ನು ಕ್ರಿಕೆಟ್ ಪ್ರೇಮಿಗಳಿಗೆ ತಿಳಿಸಿದ್ದಾರೆ. ವೈದ್ಯರು ನೀಡಿದ ಸಂದೇಶದಿಂದ ಬಹಳ ಸಂತೋಷಗೊಂಡಿದ್ದೇನೆ `ಬಹುಬೇಗ ನಾವು ಮತ್ತೆ ಭೇಟಿಯಾಗುತ್ತೇವೆ ಎನ್ನುವ ಆಸೆಯನ್ನಿದು ಬಲಗೊಳಿಸಿದೆ~ ಎಂದು ಹೇಳಿದ್ದಾರೆ.ಆರ್ಮ್‌ಸ್ಟ್ರಾಂಗ್ ನೀಡಿದ ಸಂದೇಶದ ಚಿತ್ರವೂ ಟ್ವಿಟರ್‌ನಲ್ಲಿ ಅಂಟಿಸಲಾಗಿದೆ. ಅದರಲ್ಲಿ `ಯುವಿ, ನಮ್ಮ ಲಿವ್‌ಸ್ಟ್ರಾಂಗ್ ತಂಡವು ನಿಮಗಾಗಿ ಇಲ್ಲಿದೆ~ ಎನ್ನುವ ಪದಗಳ ಸಾಲಿದೆ. ಅಷ್ಟೇ ಅಲ್ಲ ಭಾರತದ ಕ್ರಿಕೆಟಿಗನಿಗೆ ಹಾಗೂ ಅವರ ಕುಟುಂಬದವರಿಗೆ ಅಭಯ ನೀಡುವಂಥ ಮಾತುಗಳು ಅಲ್ಲಿ ಕಾಣಿಸಿಕೊಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry