ಗೆದ್ದವರಿಗೆ ಕಿಟಕಿ ಮೂಲಕ ಪ್ರಮಾಣಪತ್ರ!

7

ಗೆದ್ದವರಿಗೆ ಕಿಟಕಿ ಮೂಲಕ ಪ್ರಮಾಣಪತ್ರ!

Published:
Updated:

ಬೀದರ್: ಈ ಚಿತ್ರದಲ್ಲಿ ಇರುವವರು ಕಿಟಕಿ ಎದುರು ಸಾಲುಗಟ್ಟಿ ನಿಂತಿ ರುವುದು ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದಕ್ಕಾಗಿಯೋ ಅಥವಾ ವಿದ್ಯುತ್ ಬಿಲ್ ಪಾವತಿ ಮಾಡು ವುದಕ್ಕಾಗಿಯೋ ಅಲ್ಲ. ಬದಲಾಗಿ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರಮಾಣ ಪತ್ರ ಮತ್ತು ಫಲಕ ಪಡೆಯುವುದಕ್ಕಾಗಿ.ಮೂರು ದಿನಗಳ ಕಾಲ ನಡೆದ ಪ್ರಾಥಮಿಕ ಮತ್ತು  ಪ್ರೌಢಶಾಲಾ ಮಕ್ಕಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಶುಕ್ರವಾರ ಪ್ರಮಾಣ ಪತ್ರ ವಿತರಿಸಿದ ಪರಿ ಇದು.ಸಮಾರೋಪ ಸಮಾರಂಭ ಆಯೋಜಿಸಿ ಪ್ರಮಾಣ ಪತ್ರ ಹಾಗೂ ಫಲಕ ವಿತರಿಸುವ ಬದಲು ಕ್ರೀಡಾಂಗ ಣದ ಕೋಣೆಯೊಂದರ ಕಿಟಕಿ ಮೂಲಕ ಶಿಕ್ಷಕರ ಗೌರವಧನದ ಜೊತೆಗೇ ವಿತರಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry