ಗೆರಿಲ್ಲಾ ಜತೆ ಗುಂಡಿನ ಚಕಮಕಿ; 3 ಬಲಿ

7

ಗೆರಿಲ್ಲಾ ಜತೆ ಗುಂಡಿನ ಚಕಮಕಿ; 3 ಬಲಿ

Published:
Updated:

ಶ್ರೀನಗರ (ಐಎಎನ್‌ಎಸ್): ಜಮ್ಮು ಮತ್ತು ಕಾಶ್ಮೀರದ ಸೋಫಿಯನ್ ಜಿಲ್ಲೆಯಲ್ಲಿರುವ  ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಶಿಬಿರದ ಮೇಲೆ ಶನಿವಾರ ಗೆರಿಲ್ಲಾಗಳು ನಡೆಸಿದ ದಾಳಿಯ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಹತರಾಗಿದ್ದಾರೆ.`ಗೆರಿಲ್ಲಾಗಳ ಗುಂಡಿನ ದಾಳಿಗೆ ಪ್ರತಿಯಾಗಿ ದಾಳಿ ನಡೆಸಿದ ಸೈನಿಕರು ಇಬ್ಬರು ಉಗ್ರರನ್ನು ಹತ್ಯೆಮಾಡಿದ್ದಾರೆ. ಹತರಾದ ಉಗ್ರರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಮೂರನೇಯ ವ್ಯಕ್ತಿಯ ಗುರ್ತು ಇನ್ನೂ ಪತ್ತೆಯಾಗಿಲ್ಲ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.ಘಟನೆಯ ವೇಳೆ ಒಬ್ಬನಿಗೆ ಗಾಯವಾಗಿದ್ದು ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಸುದ್ಧಿ ತಿಳಿಯುತ್ತಿದ್ದಂತೆ ಸೋಫಿಯನ್ ಪಟ್ಟಣದಲ್ಲಿ ಹಲವಾರು ನಾಗರೀಕ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry