ಗೆರೆಥ್ ಬೇಲ್‌ಗೆ ರೂ 877 ಕೋಟಿ

7

ಗೆರೆಥ್ ಬೇಲ್‌ಗೆ ರೂ 877 ಕೋಟಿ

Published:
Updated:
ಗೆರೆಥ್ ಬೇಲ್‌ಗೆ ರೂ 877 ಕೋಟಿ

ಲಂಡನ್ (ಪಿಟಿಐ): ವೇಲ್ಸ್‌ನ ಫುಟ್‌ಬಾಲ್ ಆಟಗಾರ ಗೆರೆಥ್ ಬೇಲ್ ವಿಶ್ವ ದಾಖಲೆಯ ಮೊತ್ತಕ್ಕೆ ರಿಯಲ್ ಮ್ಯಾಡ್ರಿಡ್ ತಂಡದ ಪಾಲಾಗಿದ್ದಾರೆ. ಈ ಮೊದಲು ಟೊಟೆನ್‌ಹ್ಯಾಮ್ ತಂಡದಲ್ಲಿದ್ದ ಅವರನ್ನು ಸುಮಾರು 877 ಕೋಟಿ ರೂಪಾಯಿ ನೀಡಿ ರಿಯಲ್ ಮ್ಯಾಡ್ರಿಡ್ ಆಡಳಿತ ಖರೀದಿಸಿದೆ.ಈ ಮೊದಲು ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ 810 ಕೋಟಿ ರೂಪಾಯಿ ನೀಡಿ ಸ್ಪೇನ್‌ನ ಲಾ ಲೀಗಾ ಕ್ಲಬ್ ರಿಯಲ್ ಮ್ಯಾಡ್ರಿಡ್ ಖರೀದಿಸಿತ್ತು. 2009ರಲ್ಲಿ ಈ ವರ್ಗಾವಣೆ ಪ್ರಕ್ರಿಯೆ ನಡೆದಿತ್ತು. ರೊನಾಲ್ಡೊ ಆಗ ಎಸಿ ಮಿಲಾನ್ ತಂಡದಲ್ಲಿದ್ದರು.  24 ವರ್ಷ ವಯಸ್ಸಿನ ಗೆರೆಥ್ ಫ್ರೀ ಕಿಕ್ ಪರಿಣತ. ಅವರು ಸೋಮವಾರ ನೂತನ ಕ್ಲಬ್ ಸೇರಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry