ಗೆಲುವಿನ ಓಟ ಮುಂದುವರೆಸುತ್ತೇವೆ

7

ಗೆಲುವಿನ ಓಟ ಮುಂದುವರೆಸುತ್ತೇವೆ

Published:
Updated:

ನವದೆಹಲಿ: `ಇಲ್ಲಿಯವರೆಗೆ ಟೂರ್ನಿಯ ನಾಲ್ಕು ಪಂದ್ಯಗಳಲ್ಲಿಯೂ ನಾವು ಯೋಜಿಸಿದಂತೆ ಆಡಿದ್ದೇವೆ. ಬುಧವಾರ ಕೆನಡಾ ವಿರುದ್ಧದ ಪಂದ್ಯದಲ್ಲಿ ಆಗಿರುವ ತಪ್ಪುಗಳನ್ನು ಸರಿ ಮಾಡಿಕೊಂಡು ಶುಕ್ರವಾರದ ಪಂದ್ಯವನ್ನೂ ಗೆಲ್ಲುತ್ತೇವೆ. ನಂತರದ ಫೈನಲ್‌ನಲ್ಲಿಯೂ ನಾವು ಜಯ ಸಾಧಿಸುವುದು ಖಚಿತ~-ಭಾರತ ಪುರುಷರ ಹಾಕಿ ತಂಡದ ಉತ್ತಮ ಪ್ರದರ್ಶನದಿಂದ ಕೋಚ್ ಮೈಕೆಲ್ ನಾಬ್ಸ್ ಸಂತುಷ್ಟರಾಗಿದ್ದಾರೆ. ಮುಂದಿನ ಎರಡು ಪ್ರಮುಖ ಪಂದ್ಯಗಳನ್ನು ಗೆದ್ದುಬಿಟ್ಟರೆ ಲಂಡನ್     ಒಲಿಂಪಿಕ್ಸ್‌ಗೆ ರಹದಾರಿ ಸಿಗುತ್ತದೆ ಎನ್ನುವ ಭಾರೀ ಆತ್ವವಿಶ್ವಾದಲ್ಲಿಯೂ ಅವರಿದ್ದಾರೆ.ಶುಕ್ರವಾರ ಪೊಲೆಂಡ್‌ನೊಂದಿಗೆ ಪಂದ್ಯ ಡ್ರಾ ಮಾಡಿಕೊಂಡರೆ ಇವೇ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಂಭವವಿದೆ. ಆದ್ದರಿಂದ ಅಂತಹ ಯೋಜನೆಯೇನಾದರೂ ಇದೆಯೇ ಎಂಬ ಪ್ರಶ್ನೆಯನ್ನು ತಳ್ಳಿಹಾಕಿದ ಅವರು, `ಗೆಲುವಿನ ಓಟವನ್ನು ಮುಂದುವರಿಸುವುದೇ ನಮ್ಮ ಗುರಿ~ ಎಂದರು.`ನಮ್ಮ ಯೋಜನೆಯಂತೆ ಆಟಗಾರರ ತ್ವರಿತ ಬದಲಾವಣೆ ಕೌಶಲ್ಯ ಗೆಲುವಿಗೆ ಕಾರಣವಾಗಿದೆ. ಮುಂದಿನ ತಂಡಗಳ ಬಗ್ಗೆಯೂ ಸಾಕಷ್ಟು ಅಧ್ಯಯನ ನಡೆ ಸಿದ್ದು, ಅದಕ್ಕೆ ತಕ್ಕ ಯೋಜನೆ ರೂಪಿಸಿದ್ದೇವೆ~ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಾಜರಿದ್ದ ಗೋಲ್‌ಕೀಪರ್, ನಾಯಕ ಭರತ್ ಚೆಟ್ರಿ, `ಫೈನಲ್‌ನಲ್ಲಿ ಪೊಲೆಂಡ್ ಅಥವಾ ಫ್ರಾನ್ಸ್ ಯಾವುದಾದರೂ ಬರಲಿ ಉತ್ತಮ ಪ್ರದರ್ಶನ ನೀಡಲು ತಂಡ ಸಿದ್ಧವಾಗಿದೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry