ಗೆಲುವಿನ ಭರವಸೆ ನೀಡಿದ ಡರೆನ್ ಸಮಿ

7

ಗೆಲುವಿನ ಭರವಸೆ ನೀಡಿದ ಡರೆನ್ ಸಮಿ

Published:
Updated:

ಕೊಲಂಬೊ (ಪಿಟಿಐ): ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನು ಮಣಿಸಿ ಪ್ರಶಸ್ತಿ ಎತ್ತಿ ಹಿಡಿಯುವ ಭರವಸೆಯನ್ನು ವೆಸ್ಟ್‌ಇಂಡೀಸ್ ತಂಡದ ನಾಯಕ ಡರೆನ್ ಸಮಿ ನೀಡಿದ್ದಾರೆ.`ಲಂಕಾದ ಸಂತೋಷವನ್ನು ಹಾಳುಗೆಡುವಲು ಸಜ್ಜಾಗಿದ್ದೇವೆ. ನಾವು ಗೆಲುವಿನ ಉದ್ದೇಶ ಇಟ್ಟುಕೊಂಡು ಇಲ್ಲಿಗೆ ಬಂದಿದ್ದೇವೆ. ಅದಕ್ಕಾಗಿ ಒಂದು ತಡೆ ದಾಟಬೇಕು. ಆ ಬಳಿಕ ದೊಡ್ಡ ಪಾರ್ಟಿ ಮಾಡಲಿದ್ದೇವೆ~ ಎಂದು ಶನಿವಾರ ಹೇಳಿದರು.ಎರಡು ಬಾರಿ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ವಿಂಡೀಸ್ ತಂಡದ ಮಾಜಿ ನಾಯಕ ಕ್ಲೈವ್ ಲಾಯ್ಡ ಈ ತಂಡಕ್ಕೆ ಇ-ಮೇಲ್ ಮೂಲಕ ಶುಭಾಶಯ ಕಳುಹಿಸಿದ್ದಾರೆ. `ಇದುವರೆಗಿನ ಆಟಕ್ಕೆ ಲಾಯ್ಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫೈನಲ್ ಗೆದ್ದು ಬರುವಂತೆ ಅವರು ಹೇಳಿದ್ದಾರೆ~ ಎಂದು ಸಮಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry