ಗುರುವಾರ , ನವೆಂಬರ್ 21, 2019
26 °C

ಗೆಲುವಿನ ವಿಶ್ವಾಸದಲ್ಲಿ ಪುಣೆ

Published:
Updated:

ಪುಣೆ (ಪಿಟಿಐ): ಸನ್‌ರೈಸರ್ಸ್ ಹೈದರಾಬಾದ್ ಎದುರು ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಪುಣೆ ವಾರಿಯರ್ಸ್ ತಂಡ ಭಾನುವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು ಸೆಣಸಲಿದೆ. ಮೊದಲ ಪಂದ್ಯದಲ್ಲಿನ ನಿರಾಸೆ ಮರೆತು ಈ ಪಂದ್ಯದಲ್ಲಿ ಗೆಲುವು ಸಾಧಿಸುವ ವಿಶ್ವಾಸ ಹೊಂದಿದೆ.ಶುಕ್ರವಾರ ನಡೆದ ಪಂದ್ಯದಲ್ಲಿ ಪುಣೆ ತಂಡ ಹೈದರಾಬಾದ್ ಎದುರು 22 ರನ್‌ಗಳ ಸೋಲು ಕಂಡಿತ್ತು. ಆ್ಯಂಜಲೊ ಮ್ಯಾಥ್ಯೂಸ್ ಸಾರಥ್ಯದ ಪುಣೆ ತಂಡದಲ್ಲಿ ಯುವರಾಜ್  ಸಿಂಗ್, ರಾಬಿನ್ ಉತ್ತಪ್ಪ ಅವರಂತಹ ಬಲಿಷ್ಠ ಬ್ಯಾಟ್ಸ್‌ಮನ್‌ಗಳು ಇದ್ದಾರೆ.ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ ಇಲೆವೆನ್ ಈ ಆವೃತ್ತಿಯಲ್ಲಿ ಗೆಲುವಿನ ಆರಂಭ ಪಡೆಯುವ ಕನಸು ಕಂಡಿದೆ. ಹಿಂದಿನ ಐದೂ ಋತುವಿನಲ್ಲಿ ಪಂಜಾಬ್ ತನ್ನ ಮೊದಲ ಪಂದ್ಯದಲ್ಲಿ ಗೆಲುವು ಪಡೆದಿಲ್ಲ.ಸ್ಥಳ: ಪುಣೆ

ಆರಂಭ: ಸಂಜೆ 4ಕ್ಕೆ

ಪ್ರತಿಕ್ರಿಯಿಸಿ (+)