ಗೆಲುವಿನ ವಿಶ್ವಾಸ: ರಾಹುಲ್‌

7

ಗೆಲುವಿನ ವಿಶ್ವಾಸ: ರಾಹುಲ್‌

Published:
Updated:

ಬೆಂಗಳೂರು: ‘ನಾವು ಎರಡನೇ ಇನಿಂಗ್ಸ್‌ ನಲ್ಲಿ ವೈಫಲ್ಯ ಅನುಭವಿಸಿರಬಹುದು. ಆದರೆ, ಉತ್ತರ  ಪ್ರದೇಶ ತಂಡವನ್ನು ಕಟ್ಟಿ ಹಾಕಲು ಇಷ್ಟು ಮೊತ್ತ ಸಾಕು. ನಮ್ಮ ತಂಡದಲ್ಲಿ ಉತ್ತಮ ಬೌಲರ್‌ಗಳಿದ್ದಾರೆ. ಆದ್ದರಿಂದ ಗೆಲುವು ಪಡೆಯುವುದು ನಾವೇ’ ಎಂದು ಕರ್ನಾಟಕ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌. ರಾಹುಲ್‌ ವಿಶ್ವಾಸ ವ್ಯಕ್ತಪಡಿಸಿದರು.‘ದಿನದಾಟದ ಮೊದಲ ಅವಧಿಯಲ್ಲಿ ವಿಕೆಟ್‌ ಪಡೆಯಲು ಅವಕಾಶವಿದೆ. ಶನಿ ವಾರ ಎದುರಾಳಿ ತಂಡವನ್ನು ಸೋಲಿಸು ತ್ತೇವೆ. ಆದರೆ, ಶರತ್‌ ಗಾಯಗೊಂ ಡಿದ್ದರಿಂದ ಬೇಸರವಾಗಿದೆ. ಆದರೆ, ಮುಂಬೈ ಎದುರು ಇದೇ ಕ್ರೀಡಾಂಗಣ ದಲ್ಲಿ ಇನಿಂಗ್ಸ್‌ ಹಿನ್ನಡೆ ಅನುಭವಿಸಿ ಗೆಲುವು ಸಾಧಿಸಿದ್ದನ್ನು ನಾವು ಮರೆತಿಲ್ಲ. ಆ ಗೆಲುವು ನಮಗೆ ಸ್ಫೂರ್ತಿ ತುಂಬಿದೆ’ ಎಂದು ರಾಹುಲ್‌ ಹೇಳಿದರು.ಮಾತಿನ ಚಕಮಕಿ: ಮನೀಷ್‌ ಪಾಂಡೆ ಮತ್ತು ಉತ್ತರ ಪ್ರದೇಶದ ವಿಕೆಟ್‌ ಕೀಪರ್‌ ಏಕಲವ್ಯ ದ್ವಿವೇದಿ ನಡುವೆ ಮಾತಿನ ಚಕಮಕಿ ನಡೆದ ಘಟನೆ ಶುಕ್ರವಾರ ನಡೆಯಿತು. ಐದನೇ ಕ್ರಮಾಂ ಕದಲ್ಲಿ ಬ್ಯಾಟ್‌್ ಮಾಡಲು ಬಂದ ಪಾಂಡೆ ಸಿಕ್ಸರ್‌ ಬಾರಿಸಿದರು. ನಂತರ 15.4ನೇ ಓವರ್‌ನಲ್ಲಿ ಅಮಿತ್‌ ಮಿಶ್ರಾ ಓವರ್‌ ನಲ್ಲಿ ಔಟಾಗಿ ಕ್ರೀಸ್‌ನತ್ತ ಹೊರ ಟಿದ್ದರು. ಆಗ, ದ್ವಿವೇದಿ, ಪಾಂಡೆ ಅವ ರನ್ನು ದುರು ಗುಟ್ಟಿಕೊಂಡು ನೋಡಿ ಹೀಯಾಳಿಸಿದರು. ಇದರಿಂದ ಪಾಂಡೆ ತಾಳ್ಮೆ ಕಳೆದುಕೊಂಡ ಕಾರಣ ಇಬ್ಬರ ನಡುವೆ ಮಾತಿಕ ಚಕಮಕಿ ನಡೆಯಿತು.

ಆದರೆ, ಉತ್ತರ ಪ್ರದೇಶದ ಕೆಲ ಆಟಗಾರರು ಮತ್ತು ಅಂಪೈರ್‌ಗಳು ಇಬ್ಬರನ್ನೂ ಸಮಾಧಾನ ಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry