ಬುಧವಾರ, ಜನವರಿ 22, 2020
16 °C

ಗೆಲುವಿನ ಹಾದಿಯಲ್ಲಿ ಪಂಜಾಬ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಂಜಾಬ್‌ ತಂಡದವರು ಇಲ್ಲಿ ನಡೆಯುತ್ತಿರುವ ಕೂಚ್‌ ಬೆಹಾರ್ ಟ್ರೋಫಿ 19 ವರ್ಷ ವಯಸ್ಸಿನೊಳಗಿನವರ ಕ್ರಿಕೆಟ್‌ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಇನಿಂಗ್ಸ್‌ ಗೆಲುವಿನ ಕನಸಿನಲ್ಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಮಂಗಳವಾರ ಪಂಜಾಬ್‌ 5 ವಿಕೆಟ್‌ಗೆ 552 ರನ್‌ ಕಲೆಹಾಕಿ ಮೊದಲ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.400 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಕರ್ನಾಟಕ ದಿನದಾಟದ ಅಂತ್ಯಕ್ಕೆ 69 ಓವರ್‌ಗಳಲ್ಲಿ 4 ವಿಕೆಟ್‌ಗೆ 167 ರನ್‌ ಗಳಿಸಿತ್ತು. ಇದೀಗ ಸೋಲು ತಪ್ಪಿಸಲು   ಅಂತಿಮ ದಿನವಿಡೀ ಬ್ಯಾಟ್‌ ಮಾಡಬೇಕಾದ ಸವಾಲು ಕರ್ನಾಟಕದ ಮುಂದಿದೆ.

ಪಂಜಾಬ್‌ ಐದು ವಿಕೆಟ್‌ಗೆ 467 ರನ್‌ಗಳಿಂದ ಮಂಗಳವಾರ ಆಟ ಮುಂದುವರಿಸಿತ್ತು. 19 ಓವರ್‌ಗಳನ್ನು ಆಡಿದ ಬಳಿಕ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ ಮೊದಲ ಇನಿಂಗ್ಸ್‌ 65.4 ಓವರ್‌ಗಳಲ್ಲಿ 152 ಮತ್ತು ಎರಡನೇ ಇನಿಂಗ್ಸ್‌ 69 ಓವರ್‌ಗಳಲ್ಲಿ 4 ವಿಕೆಟ್‌ಗೆ 167 (ಅಭಿಷೇಕ್‌ ಎಂ. ರೆಡ್ಡಿ 56, ರಿಷಬ್‌ ಜಿ.ಎಂ 35, ಅಭಿನವ್‌ ಮನೋಹರ್‌ 34, ಸಿದ್ಧಾರ್ಥ್‌ ಶರ್ಮ 47ಕ್ಕೆ 2)

ಪಂಜಾಬ್‌: ಮೊದಲ ಇನಿಂಗ್ಸ್‌ 134 ಓವರ್‌ಗಳಲ್ಲಿ 5 ವಿಕೆಟ್‌ಗೆ 552 ಡಿಕ್ಲೇರ್ಡ್‌ (ನಿಖಿಲ್‌ ಎಸ್‌. ಚೌಧರಿ 62, ಕರಣ್‌ ಎಸ್‌ ಕಾಲಿಯಾ 64, ಪ್ರಸಿದ್ಧ್‌ ಎಂ. ಕೃಷ್ಣ 84ಕ್ಕೆ 3, ಕೆ.ಎನ್‌. ಭರತ್‌ 99ಕ್ಕೆ 2)

ಪ್ರತಿಕ್ರಿಯಿಸಿ (+)