ಮಂಗಳವಾರ, ನವೆಂಬರ್ 12, 2019
28 °C
ಶಿಖರ್ ಧವನ್ ಪ್ರಯತ್ನ ವ್ಯರ್ಥ; ಚೆನ್ನೈ ಸೂಪರ್ ಕಿಂಗ್ಸ್‌ಗೆ ಜಯ

ಗೆಲುವು ತಂದಿತ್ತ ನಾಯಕ ದೋನಿ

Published:
Updated:

ಚೆನ್ನೈ (ಪಿಟಿಐ): ಕೊನೆಯ ಓವರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ 15 ರನ್‌ಗಳು ಬೇಕಿದ್ದವು. ಆದರೆ ನಾಯಕ ದೋನಿ (ಅಜೇಯ 67; 37 ಎ.) ಅವರ ಬಿರುಸಿನ ಆಟದ ಮುಂದೆ ಆ ಸವಾಲು ದೊಡ್ಡದು ಎನಿಸಲೇ ಇಲ್ಲ. ಕೇವಲ ನಾಲ್ಕೇ ಎಸೆತಗಳಲ್ಲಿ ಆ ರನ್ ಗಳಿಸಿದರು.ಈ ಪರಿಣಾಮ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಸೂಪರ್ ಕಿಂಗ್ಸ್ ಐದು ವಿಕೆಟ್‌ಗಳ ಗೆಲುವು ದಾಖಲಿಸಿತು. ಕೊನೆಯ ಓವರ್ ಬೌಲ್ ಮಾಡಿದ ಆಶಿಶ್ ರೆಡ್ಡಿ ಅವರಿಗೆ ರನ್ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಸನ್‌ರೈಸರ್ಸ್ ನೀಡಿದ 160 ರನ್‌ಗಳ ಗುರಿಯನ್ನು ದೋನಿ ಬಳಗ 19.4 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ತಲುಪಿತು.ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಸನ್‌ರೈಸರ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತು.  ಕ್ವಿಂಟನ್ ಡಿ ಕಾಕ್ ಹಾಗೂ ಹನುಮ ವಿಹಾರಿ ಅವರ ವಿಕೆಟ್ ಬೇಗನೆ ಕಳೆದುಕೊಂಡಿತು. ಮೊದಲ ಓವರ್‌ನ ಮೂರನೇ ಎಸೆತದಲ್ಲಿಯೇ ಕಾಕ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದ ಮೋಹಿತ್ ಶರ್ಮ ಸೂಪರ್ ಕಿಂಗ್ಸ್‌ಗೆ ಆರಂಭಿಕ ಮೇಲುಗೈ ತಂದುಕೊಟ್ಟರು.ಆದರೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ವಿಫಲರಾದಾಗ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ತಂಡಕ್ಕೆ ಆಸರೆಯಾದರು. ಈ ಬಾರಿಯ ಐಪಿಎಲ್‌ನಲ್ಲಿ ಮೊದಲ ಪಂದ್ಯ ಆಡಿದ ಧವನ್ ಆರಂಭದಲ್ಲಿ ನಿಧಾನವಾಗಿ ರನ್ ಪೇರಿಸಿದರು. 45 ಎಸೆತಗಳನ್ನು ಎದುರಿಸಿದ ಅವರು ಹತ್ತು ಬೌಂಡರಿ ಸೇರಿದಂತೆ ಔಟಾಗದೆ 63 ರನ್ ಗಳಿಸಿದರು.13.3ನೇ ಓವರ್‌ನಲ್ಲಿ ಧವನ್ ತೀವ್ರ ಆಯಾಸದಿಂದ ಬಳಲಿದರು. ಹಾಗಾಗಿ ಪೆವಿಲಿಯನ್‌ಗೆ ಮರಳಿ ಕೊಂಚ ಹೊತ್ತು ವಿಶ್ರಾಂತಿ ಪಡೆದರು. ಈ ವೇಳೆ ಕ್ರಿಸ್‌ಗೆ ಬಂದ ನಾಯಕ ಕ್ಯಾಮರೂನ್ ವೈಟ್ ಕೂಡಾ ಬೇಗನೆ ಔಟಾದರು.ಕೊನೆಯಲ್ಲಿ ಮಿಂಚು: 17 ಓವರ್‌ಗಳಲ್ಲಿ 115 ರನ್ ಗಳಿಸಿದ್ದ ಸನ್‌ರೈಸರ್ಸ್ ತಂಡ ಕೊನೆಯ ಮೂರು ಓವರ್‌ಗಳಲ್ಲಿ ರನ್ ಮಳೆಯನ್ನೇ ಸುರಿಸಿತು. ಚೇತರಿಸಿಕೊಂಡು ಮತ್ತೆ ಕ್ರಿಸ್‌ಗೆ ಮರಳಿದ ಧವನ್ ಏಳನೇ ವಿಕೆಟ್‌ಗೆ ಆಶಿಶ್ ರೆಡ್ಡಿ ಜೊತೆ ಸೇರಿ ಕೇವಲ 16 ಎಸೆತಗಳಲ್ಲಿ 43 ರನ್ ಪೇರಿಸಿದರು. ಇದಕ್ಕೆ ಕಾರಣವಾಗಿದ್ದು ಆಶಿಶ್ ಅವರ ಬಿರುಸಿನ ಬ್ಯಾಟಿಂಗ್. ಈ ಬ್ಯಾಟ್ಸ್‌ಮನ್ ಕೇವಲ 16 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್ ಸೇರಿದಂತೆ ಔಟಾಗದೆ 36 ರನ್ ಕಲೆ ಹಾಕಿದರು. ಆಶಿಶ್ 20ನೇ ಓವರ್‌ನಲ್ಲಿ ಡ್ವೇನ್ ಬ್ರಾವೊ ಎಸೆತದಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿದರು.ಬಳಿಕ ಸವಾಲಿನ ಗುರಿ ಎದುರು ಸೂಪರ್ ಕಿಂಗ್ಸ್ ತಂಡದ ಮೈಕ್ ಹಸ್ಸಿ (45) ಹಾಗೂ ಮುರಳಿ ವಿಜಯ್ (18) ಮೊದಲ ವಿಕೆಟ್‌ಗೆ 65 ರನ್ ಕಲೆ ಹಾಕಿ ಉತ್ತಮ ಆರಂಭ ದೊರಕಿಸಿಕೊಟ್ಟರು. ವಿಜಯ್, ಹಸ್ಸಿ, ರೈನಾ ಅವರ ವಿಕೆಟ್ ಪತನ ಈ ತಂಡವನ್ನು ಒತ್ತಡಕ್ಕೆ ಸಿಲುಕಿಸಿತು. ಆದರೆ ಈ ಒತ್ತಡದ ನಡುವೆಯೂ ನಾಯಕ ದೋನಿ ಏಳು ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ ತಂಡಕ್ಕೆ ಆಸರೆಯಾದರು. ಅದರಲ್ಲೂ ವೇಗಿ ಡೇಲ್ ಸ್ಟೇಯ್ನಗೆ ಸಿಕ್ಸರ್ ಎತ್ತಿದ ರೀತಿ ಅದ್ಭುತ.

 

ಸ್ಕೋರ್ ವಿವರ:

ಸನ್‌ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ  6 ವಿಕೆಟ್‌ಗೆ 159


ಕ್ವಿಂಟನ್ ಡಿ ಕಾಕ್ ಸಿ ವಿಜಯ್ ಬಿ ಮೋಹಿತ್   04

ಶಿಖರ್ ಧವನ್ ಔಟಾಗದೆ  63

ಹನುಮ ವಿಹಾರಿ ರನ್‌ಔಟ್ (ರೈನಾ)  02

ಕ್ಯಾಮರೂನ್ ವೈಟ್ ಸಿ ದೋನಿ ಬಿ ಮೋಹಿತ್  02

ಅಮಿತ್ ಮಿಶ್ರಾ ಸಿ ಡ್ವೇನ್ ಬ್ರಾವೊ ಬಿ ಅಶ್ವಿನ್  15

ಸರ್ಗುನಮ್ ಸಿ ಮತ್ತು ಬಿ ಬ್ರಾವೊ  10

ಡರೆನ್ ಸಮಿ ಸಿ ಮಾರಿಸ್ ಬಿ ಡ್ವೇನ್ ಬ್ರಾವೊ  19

ಎ. ಆಶಿಶ್ ರೆಡ್ಡಿ ಔಟಾಗದೆ  36

ಇತರೆ: (ಲೆಗ್ ಬೈ-5, ವೈಡ್-3)  08ವಿಕೆಟ್ ಪತನ: 1-4 (ಕಾಕ್; 0.3), 2-2 (ವಿಹಾರಿ; 1.6), 3-37 (ವೈಟ್; 4.5), 4-61 (ಮಿಶ್ರಾ; 9.5), 5-98 (ಸುರ್ಗನಮ್; 15.3), 6-116 (ಸಮಿ; 17.2).

ಬೌಲಿಂಗ್: ಮೋಹಿತ್ ಶರ್ಮ 4-0-33-2, ಜಾಸನ್ ಹೋಲ್ಡರ್ 4-0-31-0, ಆರ್. ಅಶ್ವಿನ್ 4-0-21-1, ಕ್ರಿಸ್ ಮೊರಿಸ್ 3-0-24-0, ಡ್ವೇನ್ ಬ್ರಾವೊ 4-0-37-2, ರವೀಂದ್ರ ಜಡೇಜ 1-0-8-0.

ಚೆನ್ನೈ ಸೂಪರ್ ಕಿಂಗ್ಸ್ 19.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 160

ಮೈಕ್ ಹಸ್ಸಿ ಸಿ ಡಿ ಕಾಕ್ ಬಿ ಅಮಿತ್ ಮಿಶ್ರಾ  45

ಮುರಳಿ ವಿಜಯ್ ಸ್ಟಂಪ್ಡ್ ಡಿ ಕಾಕ್ ಬಿ ಅಮಿತ್  18

ಸುರೇಶ್ ರೈನಾ ಸಿ ಸಾಮಿ ಬಿ ಅಮಿತ್ ಮಿಶ್ರಾ  16

ಎಂ.ಎಸ್.ದೋನಿ ಔಟಾಗದೆ  67

ಡ್ವೇನ್ ಬ್ರಾವೊ ಸಿ ಆಶಿಶ್ ರೆಡ್ಡಿ ಬಿ ಇಶಾಂತ್  07

ರವೀಂದ್ರ ಜಡೇಜ ಸಿ ಅಮಿತ್ ಮಿಶ್ರಾ ಬಿ ಡೇಲ್ ಸ್ಟೇಯ್ನ  01

ಕ್ರಿಸ್ ಮಾರಿಸ್ ಔಟಾಗದೆ  00ಇತರೆ (ಲೆಗ್‌ಬೈ-1, ವೈಡ್-4, ನೋಬಾಲ್-1) 06

ವಿಕೆಟ್ ಪತನ: 1-65 (ವಿಜಯ್; 7.3); 2-76 (ಹಸ್ಸಿ; 9.2); 3-99 (ರೈನಾ; 13.2); 4-130 (ಬ್ರಾವೊ; 17.2); 5-145 (ಜಡೇಜ; 18.5)

ಬೌಲಿಂಗ್: ಡರೆನ್ ಸಾಮಿ 3-0-31-0 (ವೈಡ್-1), ಇಶಾಂತ್ ಶರ್ಮ 4-0-34-1 (ನೋಬಾಲ್-1, ವೈಡ್-1), ಡೇಲ್ ಸ್ಟೇಯ್ನ 4-0-45-1 (ವೈಡ್-1), ಕರಣ್ ಶರ್ಮ 4-1-8-0, ಅಮಿತ್ ಮಿಶ್ರಾ 4-0-26-3, ಆಶಿಶ್ ರೆಡ್ಡಿ 0.4-0-15-0 (ವೈಡ್-1)

ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್‌ಗೆ 5 ವಿಕೆಟ್ ಜಯ. ಪಂದ್ಯ ಶ್ರೇಷ್ಠ: ಎಂ.ಎಸ್.ದೋನಿಪ್ರತಿಕ್ರಿಯಿಸಿ (+)