ಬುಧವಾರ, ಜುಲೈ 15, 2020
22 °C

ಗೆಲುವು ಪಡೆಯಲು ಕೀನ್ಯಾಕ್ಕೆ ಕೊನೆಯ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೆಲುವು ಪಡೆಯಲು ಕೀನ್ಯಾಕ್ಕೆ ಕೊನೆಯ ಅವಕಾಶ

ಕೋಲ್ಕತ್ತ (ಪಿಟಿಐ): ಜಿಂಬಾಬ್ವೆ ಮತ್ತು ಕೀನ್ಯಾ ತಂಡಗಳು ವಿಶ್ವಕಪ್ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಭಾನುವಾರ ಪರಸ್ಪರ ಪೈಪೋಟಿ ನಡೆಸಲಿವೆ. ಕ್ರಿಕೆಟ್ ಪ್ರೇಮಿಗಳು ಮತ್ತು ಟೂರ್ನಿಯಲ್ಲಿ ಪಾಲ್ಗೊಂಡಿರುವ ಇತರ ತಂಡಗಳಿಗೆ ಈ ಪಂದ್ಯದ ಮೇಲೆ ಯಾವುದೇ ಆಸಕ್ತಿ ಇಲ್ಲ. ಏಕೆಂದರೆ ‘ಎ’ ಗುಂಪಿನಿಂದ ಈಗಾಗಲೇ ನಾಲ್ಕು ತಂಡಗಳು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿವೆ.ಆದರೆ ಕೀನ್ಯಾ ಮತ್ತು ಜಿಂಬಾಬ್ವೆ ತಂಡಗಳಿಗೆ ಭಾನುವಾರದ ಪಂದ್ಯ ಮಹತ್ವದ್ದು. ಗೆಲುವು ಪಡೆದು ಅಲ್ಪ ಘನತೆ ಕಾಪಾಡಿಕೊಳ್ಳುವ ಉದ್ದೇಶವನ್ನು ಈ ತಂಡಗಳು ಹೊಂದಿವೆ. ಎಲ್ಟಾನ್ ಚಿಗುಂಬುರ ನೇತೃತ್ವದ ಜಿಂಬಾಬ್ವೆ ಆಡಿದ ಐದು ಪಂದ್ಯಗಳಲ್ಲಿ ಒಂದು ಗೆಲುವು ಪಡೆದಿದೆ. ಅದು ಕೆನಡಾ ವಿರುದ್ಧ 175 ರನ್‌ಗಳ ಜಯ ಸಾಧಿಸಿತ್ತು.ಆದರೆ ಕೀನ್ಯಾ ತಂಡ ಆಡಿದ ಎಲ್ಲ ಐದು ಪಂದ್ಯಗಳಲ್ಲಿ ಸೋಲು ಅನುಭವಿಸಿ ಕೊನೆಯ ಸ್ಥಾನದಲ್ಲಿದೆ. 2003 ರಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಕೀನ್ಯಾ ಈ ಬಾರಿ ತೀರಾ ಕಳಪೆ ಪ್ರದರ್ಶನ ನೀಡಿದೆ. ಅಚ್ಚರಿಯ ಗೆಲುವು ಪಡೆಯವುದು ಮಾತ್ರವಲ್ಲ ಎದುರಾಳಿಗಳಿಗೆ ಪ್ರಬಲ ಪೈಪೋಟಿ ಒಡ್ಡುವುದರಲ್ಲೂ ತಂಡ ವಿಫಲಾಗಿದೆ. ಜಿಮ್ಮಿ ಕಮಾಂಡೆ ನೇತೃತ್ವದ ತಂಡ ಕೊನೆಯ ಪಂದ್ಯದಲ್ಲಿ ಗೆದ್ದು ಎರಡು ಪಾಯಿಂಟ್‌ಗಳೊಡನೆ ತವರಿಗೆ ಮರಳುವ ಕನಸು ಕಾಣುತ್ತಿದೆ.2015ರ ವಿಶ್ವಕಪ್‌ನಲ್ಲಿ ದುರ್ಬಲ ತಂಡಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಈಗಾಗಲೇ ಹೇಳಿದೆ. ಇದು ಕಾರ್ಯರೂಪಕ್ಕಿಳಿದರೆ ಕೀನ್ಯಾ ಹಾಗೂ ಜಿಂಬಾಬ್ವೆ ಮುಂದಿನ ವಿಶ್ವಕಪ್‌ನಲ್ಲಿ ಆಡುವುದು ಅನುಮಾನ. ಆದ್ದರಿಂದ ಉಭಯ ತಂಡಗಳಿಗೆ ಪ್ರಮುಖ ಟೂರ್ನಿಯಲ್ಲಿ ಆಡಲು ಲಭಿಸುವ ಕೊನೆಯ ಅವಕಾಶ ಇದು.ಕೆನಡಾ ವಿರುದ್ಧ ಭರ್ಜರಿ ಗೆಲುವು ಪಡೆದರೂ ಜಿಂಬಾಬ್ವೆ ತಂಡ ಬಳಿಕ ಚೇತರಿಕೆಯ ಪ್ರದರ್ಶನ ನೀಡಲಿಲ್ಲ.ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ಕೈಯಲ್ಲಿ ದೊಡ್ಡ ಅಂತರದ ಸೋಲು ಅನುಭವಿಸಿದೆ.ಬ್ಯಾಟ್ಸ್‌ಮನ್‌ಗಳು ಪೂರ್ಣ ವೈಫಲ್ಯ ಅನುಭವಿಸಿದ್ದು ತಂಡದ ಕಳಪೆ ಪ್ರದರ್ಶನಕ್ಕೆ ಕಾರಣ.ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲೂ ತಂಡದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ‘ನಾವು ಚೆನ್ನಾಗಿ ಬೌಲಿಂಗ್ ಮತ್ತು ಫೀಲ್ಡಿಂಗ್ ಮಾಡಿದೆವು. ಆದರೆ ಬ್ಯಾಟಿಂಗ್ ಕೈಕೊಟ್ಟಿತು’ ಎಂದು ಪಾಕಿಸ್ತಾನದ ವಿರುದ್ಧದ ಪಂದ್ಯದ ಬಳಿಕ ಚಿಗುಂಬುರ ಹೇಳಿದ್ದರು.ಕೀನ್ಯಾ ತಂಡ ಕಳೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಸೋಲು ಅನುಭವಿಸುವ ಮುನ್ನ ಅಲ್ಪ ಪೈಪೋಟಿ ನಡೆಸಿತ್ತು.324 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ತಂಡ ಆರು ವಿಕೆಟ್‌ಗೆ 246 ರನ್ ಪೇರಿಸಲು ಯಶಸ್ವಿಯಾಗಿತ್ತು.ಕಾಲಿನ್ಸ್ ಒಬುಯಾ ಔಟಾಗದೆ 98 ರನ್ ಗಳಿಸಿದ್ದರು. ಆಸೀಸ್ ವಿರುದ್ಧ ನೀಡಿದ ಪ್ರದರ್ಶನ ತಂಡಕ್ಕೆ ಅಲ್ಪ ಉತ್ತೇಜನ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.