ಗೆಳೆತನ

7

ಗೆಳೆತನ

Published:
Updated:

ಚಂದಪದ್ಯ

ಮೊಬೈಲುಗಳೆರಡು

ರಸ್ತೆಯ ಬದಿಯಲಿ

ದೋಸ್ತಿಯ ಮಾಡಿದವು

ಕೆಂಪು ಮೊಬೈಲು “ಉಶ್ ಉಶ್‌”

ಎಂದಿತು ಒನಪಿನಲಿ

ಕೊಲವರಿ ಕೊಲವರಿ ಡಿ

ಎಂದಿತು ಮತ್ತೊಂದು

ಜೇಬಲಿ ಇಣುಕುತ

ಕೈಯೊಳು ಕುಣಿಯುತ

ಕಣ್ ಕಣ್ ಕೂಡಿದವು

ಸಿಂಗಲ್ ನಾನು

ಡಬಲ್ ಸಿಮ್ಮು ಆಗೋಣ

ಬಾರೆ ಎಂದಿತು ಕೆಂಪಣ್ಣ

ಪ್ರೀತಿಯ ಒಡೆಯ

ಬಿಡುವನೆ ನನ್ನ

ಎಂದಿತು ಕೆಂಪಕ್ಕ

ಕಣ್ಣನು ತಪ್ಪಿಸಿ

ಜಿಗಿಯುತ ಬಾರೆ

ಒಂದೆಡೆ ನಾವು ಸೇರೋಣ

ಬೇಡವೋ ಬೇಡ

ದೂರವೇ ಇದ್ದು

ಮೆಸೇಜ್ ನಾವು ಕಳಿಸೋಣ!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry