ಗೆಳೆಯನಿಗಾಗಿ ಕಮಲ್‌ ಗಾನ

7

ಗೆಳೆಯನಿಗಾಗಿ ಕಮಲ್‌ ಗಾನ

Published:
Updated:

ನೆಚ್ಚಿನ ಸ್ನೇಹಿತ ಆರ್‌.ಸಿ.ಶಕ್ತಿ ಅವರ ಮೇಲಿನ ಪ್ರೀತಿಗೆ ಮಣಿದ ಬಹುಮುಖಿ ಕಲಾವಿದ, ನಟ ಕಮಲ್‌ ಹಾಸನ್‌ ಅವರು ಒಂದು ಚಿತ್ರಗೀತೆ ಬರೆದು, ಆ ಹಾಡಿಗೆ ಸ್ವತಃ ತಾವೇ ದನಿಯಾಗಿದ್ದಾರೆ.‘ಇರೈ ಎನ ಎದೈ ಸೊಲ್ವದು’ ಎಂಬ ಸಾಲಿನೊಂದಿಗೆ ಪ್ರಾರಂಭವಾಗುವ ಈ ಗೀತೆಯು ಅನುಭವಿ ನಿರ್ದೇಶಕ ಆರ್‌.ಸಿ.ಶಕ್ತಿ ಅವರು ನಿರ್ದೇಶನ ಮಾಡಿರುವ 45 ನಿಮಿಷದ ಕಿರುಚಿತ್ರದಲ್ಲಿ ಬಳಕೆಯಾಗಲಿದೆ.  ‘ರೋಜಕ್ಕಲ್‌ ಐನ್ದು’ ಎಂಬುದು ಚಿತ್ರದ ಹೆಸರು. ‘ನನ್ನ ಮತ್ತು ಕಮಲ್‌ ನಡುವಿನ ಸ್ನೇಹ ತುಂಬ ಹಳೆಯದ್ದು. ನಾನು ಸಹಾಯಕ ನಿರ್ದೇಶಕನಾಗಿ ದುಡಿಯುತ್ತಿದ್ದಾಗ ಕಮಲ್‌ ಅವರು ಸಹಾಯಕ ನೃತ್ಯ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಆಗಿನಿಂದಲೂ ನಾವಿಬ್ಬರು ಆತ್ಮೀಯ ಸ್ನೇಹಿತರು’ ಎನ್ನುತ್ತಾರೆ ಶಕ್ತಿ.‘ಕಿರುಚಿತ್ರದಲ್ಲಿ ನೀವು ಹಾಡಬೇಕು ಎಂದು ನಾನು ಕೇಳಿಕೊಂಡಾಗ ಕಮಲ್‌ ತಕ್ಷಣ ಒಪ್ಪಿಕೊಂಡರು. ತತ್‌ಕ್ಷಣವೇ ಗೀತೆಯನ್ನು ಹಾಡುವುದರ ಜತೆಗೆ ಸಾಹಿತ್ಯವನ್ನು ನಾನೇ ರಚಿಸುತ್ತೇನೆ ಎಂದರು. ಅವರು ಹೇಳಿದಂತೆ 24 ಗಂಟೆಯೊಳಗೆ ಗೀತಸಾಹಿತ್ಯ ರಚಿಸಿ ಅಚ್ಚರಿ ಮೂಡಿಸಿದರು’ ಎಂದು ಗೆಳೆಯನನ್ನು ಹೊಗಳಿದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry