ಗೇಲ್ ಹಣೆಗೆ ಚೆಂಡು ತಟ್ಟಿದ ಬಾಲಕಿ

7

ಗೇಲ್ ಹಣೆಗೆ ಚೆಂಡು ತಟ್ಟಿದ ಬಾಲಕಿ

Published:
Updated:
ಗೇಲ್ ಹಣೆಗೆ ಚೆಂಡು ತಟ್ಟಿದ ಬಾಲಕಿ

ಬೆಂಗಳೂರು: ಕ್ರಿಸ್ ಗೇಲ್ ಸಿಕ್ಸರ್ ಸಿಡಿಸಿದ್ದಾಗ ಇದೇ ಕ್ರೀಡಾಂಗಣದ ಗ್ಯಾಲರಿಯಲ್ಲಿ ಕುಳಿತಿದ್ದ ಪುಟ್ಟ ಬಾಲಕಿ ತಿಯಾ ಭಾಟಿಯಾ ಹಣೆಗೆ ಪೆಟ್ಟು ಬಿದ್ದ ಘಟನೆ ಕ್ರಿಕೆಟ್ ಪ್ರೇಮಿಗಳ ಮನದಿಂದ ಇನ್ನೂ ಮಾಸಿಲ್ಲ. ಅದೇ ಪುಟ್ಟಬಾಲೆಯು ಸೋಮವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರತ್ಯಕ್ಷಳಾಗಿ ಗಮನ ಸೆಳೆದಳು.ವಿಶೇಷವೆಂದರೆ ಮುದ್ದಾದ ಕೈಯಲ್ಲಿ ಚೆಂಡನ್ನು ಹಿಡಿದಿದ್ದ ತಿಯಾ ಅದಕ್ಕೆ ಮುತ್ತಿಟ್ಟು, ಅದರಿಂದ ಗೇಲ್ ಹಣೆಗೆ ಮೆದುವಾಗಿ ತಟ್ಟಿ ನಕ್ಕಳು. ಆಗ ರಾಯಲ್ ಚಾಲೆಂಜರ್ಸ್ ತಂಡದ ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್ ಮೊಗದಲ್ಲಿಯೂ ನಗೆಯು ನಲಿದಾಡಿತು.ಏಪ್ರಿಲ್ 17ರಂದು ಇದೇ ಅಂಗಳದಲ್ಲಿ ನಡೆದಿದ್ದ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಗೇಲ್ ಭರ್ಜರಿ ಸಿಕ್ಸರ್ ಸಿಡಿಸಿದ್ದರು. ಆಗ ಎತ್ತರದಲ್ಲಿ ಬಂದ ಚೆಂಡು ತಿಯಾಗೆ ತಾಗಿ ಗಾಯ ಮಾಡಿತ್ತು. ಅಂದು ಸಿಕ್ಸರ್‌ಗೆ ಎತ್ತಿದ್ದ ಚೆಂಡನ್ನೇ ಉಡುಗೊರೆಯಾಗಿ ಪಡೆದಾಗ ಹನ್ನೊಂದು ವರ್ಷದ ಬಾಲಕಿಯು ಇಷ್ಟಗಲ ಕಣ್ಣರಳಿಸಿ ಸಂಭ್ರಮಿಸಿದಳು.`ನಿಮ್ಮ ಆಟ ನೋಡಲು ಇಷ್ಟ. ಇನ್ನಷ್ಟು ಸಿಕ್ಸರ್ ಸಿಡಿಸಿ~ ಎಂದು ಶುಭ ಹಾರೈಸಿದಳು.ಐಪಿಎಲ್ ಐದನೇ ಅವತರಣಿಕೆಯಲ್ಲಿ ಈವರೆಗೆ ಆಡಿರುವ ಪಂದ್ಯಗಳಲ್ಲಿ ಗೇಲ್ 44 ಸಿಕ್ಸರ್ ಸಿಡಿಸಿ ಈ ಟ್ವೆಂಟಿ-20 ಟೂರ್ನಿಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಕಳೆದ ಬಾರಿಯೂ ಅವರು ಇಷ್ಟೇ ಬಾರಿ ಚೆಂಡನ್ನು ಸಿಕ್ಸರ್‌ಗೆ ಎತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry