ಗೊಂದಲಗಳ ಗೂಡು

7

ಗೊಂದಲಗಳ ಗೂಡು

Published:
Updated:

ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ಪ್ರತಿ ನೇಮಕ ಪ್ರಕ್ರಿಯೆಯೂ ಗೊಂದಲಮಯ. ಯಾವುದೇ ನೇಮಕ ಪ್ರಕ್ರಿಯೆ ಒಂದರಿಂದ ಮೂರು ವರ್ಷಗಳವರೆಗೆ ನಡೆಯುತ್ತದೆ. ಯುಪಿಎಸ್‌ಸಿ ಮಾದರಿಯಲ್ಲಿ ಪರೀಕ್ಷೆ  ದಿನಾಂಕ, ಕೀ ಉತ್ತರ ಪ್ರಕಟಣೆ, ಫಲಿತಾಂಶ ಇತ್ಯಾದಿಗಳ ಬಗ್ಗೆ ಮೊದಲೇ ತಿಳಿಸುವ ವ್ಯವಸ್ಥೆ ಇಲ್ಲ.

 

ಏನಾದರೂ ವಿಚಾರಿಸಲು ಕಚೇರಿಗೆ ದೂರವಾಣಿ ಕರೆ ಮಾಡಿದರೆ ಅದನ್ನು ಸ್ವೀಕರಿಸಿ ಉತ್ತರ ಹೇಳುವವರು ಸಿಗುವುದೇ ಅಪರೂಪ. ಮುಂದಿನ ದಿನಗಳಲ್ಲಿ ವೆಬ್‌ಸೈಟ್ ನೋಡಿ ಎನ್ನುವ ಮಾಮೂಲು ಉತ್ತರ. ನಿತ್ಯ ಹಣಕೊಟ್ಟು ವೆಬ್‌ಸೈಟ್ ನೋಡುವ ಕಷ್ಟ ನಿರುದ್ಯೋಗಿಗಳದು.2011 ಡಿಸೆಂಬರ್ 18 ರಂದು ಪಿಡಿಒ ಹುದ್ದೆಗೆ ಪರೀಕ್ಷೆ ನಡೆಯಿತು. ಎರಡು ತಿಂಗಳು ಕಳೆದರೂ ಆಯೋಗ ಪರಿಷ್ಕೃತ ಕೀ ಉತ್ತರ ಪ್ರಕಟಿಸಿಲ್ಲ. ನಿರುದ್ಯೋಗಿಗಳ ಹಣೆ ಬರಹ ಬರೆಯುವ `ಪಂಡಿತರು~ ಉತ್ತರ ಗೊತ್ತಿಲ್ಲದೆ ಪ್ರಶ್ನೆಪತ್ರಿಕೆ ತಯಾರಿಸುತ್ತಾರೆಯೆ? 5-6 ಪರಿಷ್ಕೃತ ಕೀ ಉತ್ತರ ಪ್ರಕಟಿಸಲು 2-3 ತಿಂಗಳು ಬೇಕೆ?  ಪಿಡಿಒ ನೇಮಕಾತಿ ಜಿಲ್ಲಾ ಮಟ್ಟದ್ದೇ ಅಥವಾ ರಾಜ್ಯ ಮಟ್ಟದ್ದೇ ಎನ್ನುವ ಗೊಂದಲವೂ ಪರಿಹಾರವಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry