ಗೊಂದಲ ಪರಿಹರಿಸಿ

7

ಗೊಂದಲ ಪರಿಹರಿಸಿ

Published:
Updated:

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕೆ.ಆರ್.ಇ.ಐ.ಎಸ್.)ದ ಮುಖಾಂತರ ರಾಜ್ಯ ಸರ್ಕಾರ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಗೊಂಡಿದೆ. ಅಂತಿಮ ಆಯ್ಕೆಪಟ್ಟಿಯ ನಿರೀಕ್ಷೆಯಲ್ಲಿ ಅಭ್ಯರ್ಥಿಗಳಿದ್ದಾರೆ.ಸರ್ಕಾರದ ಬೇರೆ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಾವಿರಾರು ಮಂದಿ ಅಭ್ಯರ್ಥಿಗಳು ತಮ್ಮ ಮಾತೃ ಇಲಾಖೆಯ ಒಪ್ಪಿಗೆ ಪತ್ರ ಸಲ್ಲಿಸಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದಾರೆ. ಆದರೆ ಈ ಹೊಸ ಹುದ್ದೆಗಳಿಗೆ ಸಂಬಂಧಿಸಿದಂತೆ  ಕೆಲವು ಗೊಂದಲಗಳಿವೆ. ಅವನ್ನು  ನಿವಾರಿಸಬೇಕಿದೆ.ಹಾಲಿ ಹುದ್ದೆಯಲ್ಲಿ ಪಡೆಯುತ್ತಿದ್ದ ಪಿಂಚಣಿ, ಸರ್ಕಾರಿ ವಿಮಾ ಸೌಲಭ್ಯ, ಸಾಮಾನ್ಯ ಭವಿಷ್ಯ ನಿಧಿ ಇತ್ಯಾದಿಗಳನ್ನು ಹೊಸ ಹುದ್ದೆಯಲ್ಲೂ ಮುಂದುವರಿಸಲಾಗುತ್ತದೆಯೇ? ಹಿಂದಿನ ಸೇವಾವಧಿಯನ್ನು ಪರಿಗಣಿಸಲಾಗುತ್ತದೆಯೇ? ಹೊಸ ಪಿಂಚಣಿ ಸೌಲಭ್ಯವನ್ನು ಮುಂದುವರಿಸಲು ಅವಕಾಶವಿದೆಯೇ? ಪ್ರಾಂಶುಪಾಲರ ಹುದ್ದೆಗೆ ಬಡ್ತಿಗೆ ಅವಕಾಶವಿದೆಯೇ ಇತ್ಯಾದಿ   ಪ್ರಶ್ನೆಗಳಿಗೆ ಸಂಬಂಧಿಸಿದವರು ಉತ್ತರಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry