ಸೋಮವಾರ, ಜನವರಿ 20, 2020
20 °C

ಗೊಡಚಿ ವೀರಭದ್ರೇಶ್ವರ ರಥೋತ್ಸವ 17ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ರಾಮದುರ್ಗ ತಾಲ್ಲೂಕಿನ ಸುಕ್ಷೇತ್ರ ಗೊಡಚಿಯ ಅಖಿಲ ಕರ್ನಾಟಕ ವೀರಭದ್ರೇಶ್ವರ ವೀರ ಪುರವಂತರ ಸೇವಾ ಸಮಿತಿಯ ಆಶ್ರಯದಲ್ಲಿ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಇದರಂಗವಾಗಿ ಇದೇ 2ರಿಂದ 5ರ ವರೆಗೆ ಅಗ್ನಿಕುಂಡ ಧರ್ಮಕಾರ್ಯದ ಕಟ್ಟಿಗೆ ಸಂಗ್ರಹದ ಮೆರವಣಿಗೆ ನಡೆಯಲಿದೆ. 2ರಂದು ಬೆಳಗಾವಿ, 3ರಂದು ಹಿರೇಬಾಗೇವಾಡಿ, ಸಂಪಗಾವಿ, ಬೈಲಹೊಂಗಲ, ಹೊಸೂರ, 4ರಂದು ಮಲ್ಲೂರ, ಯಕ್ಕುಂಡಿ, ಮುನವಳ್ಳಿ, ಶಿರಸಂಗಿ, ಸುರೇಬಾನ, ಕಲಹಾಳ, ಬಾದಾಮಿ, ಬಾಗಲಕೋಟೆ ಹಾಗೂ 5ರಂದು ಕಲಾದಗಿ, ಲೋಕಾಪುರ. ರಾಮದುರ್ಗ, ತೋರಣಗಟ್ಟಿ, ಕಡಕೊಳ, ಗೊಡಚಿಯಲ್ಲಿ ಮೆರವಣಿಗೆ ನಡೆಯಲಿದೆ.16ರಂದು ಸುಕ್ಷೇತ್ರ ಗೊಡಚಿಯಲ್ಲಿ ಪುರವಂತರ ಸಮಾವೇಶ ನಡೆಯಲಿದೆ. 17ರಂದು ಬೆಳಿಗ್ಗೆ 5ಕ್ಕೆ ಅಗ್ನಿ ಹೊತ್ತಿಸುವ ಕಾರ್ಯಕ್ರಮ, ಮಧ್ಯಾಹ್ನ 3ಕ್ಕೆ ಪುರವಂತರಿಂದ ಅಗ್ನಿಪ್ರವೇಶ ಹಾಗೂ ಸಂಜೆ 4ಕ್ಕೆ ಮಹಾರಥೋತ್ಸವ ನಡೆಯಲಿದೆ. ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು  ಎಂದು ಜಾತ್ರಾ ಕಮಿಟಿ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)