ಗೊತ್ತೇ ಇರದ ದ್ವೀಪದಲ್ಲಿ ಪಯಣ

7

ಗೊತ್ತೇ ಇರದ ದ್ವೀಪದಲ್ಲಿ ಪಯಣ

Published:
Updated:

ಅದು ಧುತ್ತನೆ ಸಿಗುವ ದ್ವೀಪ. ಅದರ ಕುರಿತು ಮೊದಲು ತಿಳಿದವರೇ ಇಲ್ಲ. ಅದು ನಿಬ್ಬೆರಗಾಗಿಸುವ ಜಗತ್ತನ್ನು ಅನಾವರಣಗೊಳಿಸುತ್ತದೆ. ಅಲ್ಲಿ ಸಿಲುಕಿದ ಮಲತಂದೆ ಹಾಗೂ ಮಗ ಏನೆಲ್ಲಾ ಸವಾಲಿನ ಕ್ಷಣಗಳನ್ನು ಎದುರಿಸುತ್ತಾರೆ ಎಂಬ ಹೂರಣ ಹೊತ್ತ `ಜರ್ನಿ 2~ ಇಂಗ್ಲಿಷ್ ಚಿತ್ರ ಜನಮಾನಸವನ್ನು ಗೆದ್ದಿದೆ.

 

ಆ ಗೆಲುವಿಗೆ ಮುಖ್ಯ ಕಾರಣ ಅದರಲ್ಲಿನ `3 ಡಿ~ ತಂತ್ರಜ್ಞಾನ ತೋರುವ ಕಾಡಿನ ಬೆರಗು. ಹಿಂದಿ ಚಿತ್ರಗಳಲ್ಲೂ ಕೆಲವು ನಿರ್ದೇಶಕರು ಇತ್ತೀಚೆಗೆ `3 ಡಿ~ ತಂತ್ರಜ್ಞಾನವನ್ನು ಅಳವಡಿಸಲು ಪ್ರಾರಂಭಿಸಿದ್ದಾರೆ. `ಡಾನ್ 2~ ಅದಕ್ಕೆ ಇತ್ತೀಚಿನ ಉದಾಹರಣೆ. ನಾಯಕ ಶಾರುಖ್ ಖಾನ್ ಬಂದೂಕಿನ ಕೊಳವೆಯನ್ನು ಮುಂದೆಮಾಡಿದಾಗ ಅದು ಕಣ್ಣೆದುರೇ ಬಂದಿತೇನೋ ಎಂಬಂತೆ ಕಾಣುವಷ್ಟಕ್ಕೇ ಬಾಲಿವುಡ್‌ನವರ `3 ಡಿ~ ಮೋಹ ಸೀಮಿತ.ಆದರೆ, `ಜರ್ನಿ 2~ ಒಂದು ಅದ್ಭುತವಾದ `3 ಡಿ~ ಪಯಣ. 2008ರಲ್ಲಿ ತೆರೆಕಂಡಿದ್ದ `ಜರ್ನಿ ಟು ದಿ ಸೆಂಟರ್ ಆಫ್ ದಿ ಅರ್ಥ್~ನ ಎರಡನೇ ಭಾಗವಿದು. ಡಬ್ಲ್ಯುಡಬ್ಲ್ಯುಎಫ್ ಅಖಾಡದಲ್ಲಿ `ರಾಕ್~ ಎಂದೇ ಜನಪ್ರಿಯರಾಗಿರುವ ಡ್ವೇನ್ ಜಾನ್ಸನ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. `ಜರ್ನಿ 2: ದಿ ಮಿಸ್ಟೀರಿಯಸ್ ಐಲೆಂಡ್~ ಚಿತ್ರವು ಇಂಗ್ಲಿಷ್ ಅಷ್ಟೇ ಅಲ್ಲದೆ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲೂ ಡಬ್ ಆಗಿ ತೆರೆಕಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry