ಗೊಬ್ಬರ ಕೊರತೆ: ರೈತರ ಪರದಾಟ

7

ಗೊಬ್ಬರ ಕೊರತೆ: ರೈತರ ಪರದಾಟ

Published:
Updated:

ಯಳಂದೂರು: ತಾಲ್ಲೂಕಿನಲ್ಲಿ ರೈತರು ರಸಗೊಬ್ಬರ ಕೊರತೆಯಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕಿನ ಗೌಡಹಳ್ಳಿ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗುರುವಾರ ಗೊಬ್ಬರ ಸಿಗದೆ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.`ಈಗಾಗಲೇ ಕಳೆದ ವಾರ ಬಿದ್ದ ಮಳೆ ಹಾಗೂ ಕಬಿನಿ ಕಾಲುವೆಯಲ್ಲಿ ಬಿಟ್ಟಿರುವ ನೀರನ್ನು ಬಳಸಿಕೊಂಡು ಈ ಭಾಗದಲ್ಲಿನ ರೈತರು ಬತ್ತವನ್ನು ನಾಟಿ ಮಾಡಿದ್ದಾರೆ. ಇದಕ್ಕೆ ಸರಿಯಾದ ಸಮಯಕ್ಕೆ ಗೊಬ್ಬರ ಕೊಡದಿದ್ದರೆ, ಫಸಲು ನಷ್ಟವಾಗುವ ಭೀತಿ ಇದೆ. ಆದರೆ ಅಧಿಕಾರಿಗಳ ಬೇಜವ್ದಾರಿಯಿಂದ ಅಗತ್ಯ ಪ್ರಮಾಣದ ಗೊಬ್ಬರ ದಾಸ್ತಾನಾಗಿಲ್ಲ.ಈ ಸಹಕಾರ ಸಂಘದಲ್ಲಿ ಇಷ್ಟೆಲ್ಲಾ ಅವಾಂತರಗಳು ನಡೆಯುತ್ತಿದ್ದರೂ, ಕೃಷಿ ಅಧಿಕಾರಿಯೂ ಸೇರಿದಂತೆ ಯಾರೊಬ್ಬರೂ ಸ್ಥಳಕ್ಕೆ ಆಗಮಿಸಿಲ್ಲ. ಮುಂದಿನ ದಿನಗಳಲ್ಲಾದರೂ ಸರಾಗವಾಗಿ ರೈತರಿಗೆ ಗೊಬ್ಬರ ಸಿಗುವಂತೆ ಮಾಡಬೇಕು~ ಎಂದು ರೈತರಾದ ಪ್ರಭುಸ್ವಾಮಿ, ಮಲ್ಲೇಶ್, ಕೊಂಡೇಗೌಡ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry