ಗೊಬ್ಬರ, ಬಿತ್ತನೆ ಬೀಜಕ್ಕೆ ಬೇಡಿಕೆ

ಶನಿವಾರ, ಜೂಲೈ 20, 2019
22 °C

ಗೊಬ್ಬರ, ಬಿತ್ತನೆ ಬೀಜಕ್ಕೆ ಬೇಡಿಕೆ

Published:
Updated:

ಸೇಡಂ: ಈಗಾಗಲೇ ತಾಲ್ಲೂಕಿನ ಕೆಲ ಭಾಗಗಳಲ್ಲಿ ಮುಂಗಾರು ಮಳೆ ಬಂದಿರುವ ಹಿನ್ನಲೆಯಲ್ಲಿ ರೈತರು ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ಸಂಗ್ರಹಿಸುವಲ್ಲಿ ಮುಂದಾಗಿದ್ದಾರೆ.ತಾಲ್ಲೂಕಿನ ಸೇಡಂ, ಆಡಕಿ, ಮುಧೋಳ ಮತ್ತು ಕೋಡ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಗಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪರಮಿಟ್ ನೀಡುವ ಮೂಲಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಭಜರಂಗ ಸಿಂಗ್ ಠಾಕೂರ ತಿಳಿಸಿದರು.ರೈತರು ತಮ್ಮ ಜಮೀನಿನ ಹೊಲ್ಡಿಂಗ್ ಪತ್ರ (ಲಾವಣಿ) ತೆಗೆದುಕೊಂಡು ತಮ್ಮ ವ್ಯಾಪ್ತಿಗೆ ಬರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಉತ್ತಮ ತಳಿಯ ತೊಗರಿ, ಉದ್ದು, ಹೆಸರು, ಭತ್ತ, ಸಜ್ಜೆ ಬೆಳೆಗಳ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ಪಡೆಯಬಹುದು.ರಸಗೊಬ್ಬರಕ್ಕಾಗಿ ಸಹಕಾರ ಸಂಘಗಳನ್ನು ಹೊಂದಿರುವ ಕಾನಾಗಡ್ಡಾ, ಸಿಂಧನಮಡು, ಹಾಬಾಳ (ಟಿ), ಬಟಗೇರಾ (ಬಿ), ಕೋಡ್ಲಾ ದಲ್ಲಿ ರಸಗೊಬ್ಬರ ದಾಸ್ತಾನು ಪ್ರಕ್ರಿಯೆ ಪ್ರಾರಂಭಗೊಂಡಿದ್ದು ರೈತರು ಡಿಎಪಿ ರಸಗೊಬ್ಬರದ ಮೇಲೆ ಅವಲಂಬಿಸದೆ ಸೂಫರ್‌ಫಾಸ್ಪೇಟ್ (ಎಸ್‌ಎಸ್‌ಪಿ) ಹಾಗೂ ಯೂರಿಯಾ ಮಿಶ್ರ ಮಾಡಿ ಬಿತ್ತನೆಗೆ ಉಪಯೋಗಿಸಿದರೆ ಡಿಎಪಿ ಗಿಂತಲೂ ಹೆಚ್ಚಿನ ಇಳುವರಿ ಬರುವುದು ಎಂದು ಠಾಕೂರ ವಿವರಿಸಿದ್ದಾರೆ. ಎಸ್‌ಎಸ್‌ಪಿ 2 ಚೀಲ ಮತ್ತು 25 ಕೆಜಿ ಮತ್ತು ಮಿಶ್ರಣ 25 ಕೆಜಿ ಪ್ರತಿ ಎಕರೆಗೆ ಹಾಕಿದರೆ ಉತ್ತಮ ಫಲಿತಾಂಶ ಬರುವುದು ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry