ಗೊಯಟ್ ಹೇಳಿಕೆಗೆ ಕಾಂಗ್ರೆಸ್ ಖಂಡನೆ

7

ಗೊಯಟ್ ಹೇಳಿಕೆಗೆ ಕಾಂಗ್ರೆಸ್ ಖಂಡನೆ

Published:
Updated:

ನವದೆಹಲಿ (ಪಿಟಿಐ): ಹರಿಯಾಣದ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಪಕ್ಷದ ಮುಖಂಡ ಧರ್ಮವೀರ್ ಗೊಯಟ್ ಅವರು ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್, ಇಂತಹ ಹೇಳಿಕೆ ನೀಡಿ ಅತ್ಯಾಚಾರವನ್ನು ಸಮರ್ಥಿಸುವ ವ್ಯಕ್ತಿಗೆ ಮಾನಸಿಕ ತಜ್ಞರ ಸಲಹೆ ಅಗತ್ಯವಾಗಿದೆ ಎಂದು ತಿಳಿಸಿದೆ.ಅತ್ಯಾಚಾರದಂತಹ ಹೇಯ ಕೃತ್ಯವನ್ನು ಸಮರ್ಥಿಸುವ ವ್ಯಕ್ತಿಯು ಖಂಡಿತವಾಗಿಯೂ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾನೆ ಎಂದೇ ಪರಿಗಣಿಸಬೇಕಾಗುತ್ತದೆ. ಅಂತಹ ವ್ಯಕ್ತಿಗೆ ಮಾನಸಿಕ ರೋಗ ತಜ್ಞರ ಚಿಕಿತ್ಸೆ ಅಗತ್ಯ ಎಂದು ಕಾಂಗ್ರೆಸ್ ವಕ್ತಾರ ಮನಿಶ್ ತಿವಾರಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry