ಗೋಗಿ ಯುರೇನಿಯಂ ಗಣಿಗಾರಿಕೆ ಭಯಬೇಡ

7

ಗೋಗಿ ಯುರೇನಿಯಂ ಗಣಿಗಾರಿಕೆ ಭಯಬೇಡ

Published:
Updated:

ಶಹಾಪುರ: ಗೋಗಿ ಯುರೇನಿಯಂ ಗಣಿಗಾರಿಕೆಯಿಂದ ಜನತೆಯ ಮೇಲೆ ಆಗುವ ದುಷ್ಪರಿಣಾಮದ  ಬಗ್ಗೆ ತನಿಖೆ ನಡೆಸಲಾಗುವುದು. ಮೊದಲು ನಮ್ಮ ಆರೋಗ್ಯದ ಬಗ್ಗೆ ವಿಚಾರ ನಂತರ ಗಣಿಗಾರಿಕೆ. ನೆರೆ ಗ್ರಾಮ ಉಕ್ಕನಾಳದವನಾಗಿದ್ದು. ನನಗೂ ನಿಮ್ಮ ನೋವಿನ ಸಮಸ್ಯೆ ಗೊತ್ತಿದೆ. ಯುರೇನಿಯಂ ಕಾರ್ಪೋರೇಶನ್ ಆಫ್ ಇಂಡಿಯಾ ಹಾಗೂ ಸರ್ಕಾರ ಪರಿಸರ ಹಾಗೂ ಆರೋಗ್ಯದ ಬಗ್ಗೆ ಸಮಗ್ರವಾಗಿ ವಿಚಾರಣೆ ಮಾಡಿ ವರದಿ ನೀಡುವಂತೆ ಸೂಚಿಸಿದೆ ನಿಮಗೆ ಅನ್ಯಾಯವಾಗದಂತೆ ವಸ್ತುನಿಷ್ಠ ವರದಿಯನ್ನು ಸಲ್ಲಿಸುವೆ ಎಂದು ಖ್ಯಾತ ಕ್ಯಾನ್ಸರ್ ತಜ್ಞ ಡಾ.ಶೇಖರ ಪಾಟೀಲ್ ಗ್ರಾಮ ಸ್ಥರಿಗೆ ಅಭಯ ನೀಡಿದರು.ಗೋಗಿ ಗ್ರಾಮದಲ್ಲಿ ಯುರೇನಿಯಂ ಗಣಿಗಾರಿಕೆಯಿಂದ ಜನತೆಯ ಮೇಲೆ ಆಗುವ ಪರಿಣಾಮದ ಬಗ್ಗೆ ಅರಿಯಲು ತಜ್ಞರ ತಂಡದ ಮುಖ್ಯಸ್ಥರಾಗಿ ಆಗಮಿ ಸಿದಕ್ಕೆ ಗ್ರಾಮಸ್ಥರು ಹಮ್ಮಿಕೊಂಡಿದ್ದ ಅಭಿನಂದನ ಸಭೆಯಲ್ಲಿ ಮಾತನಾಡಿ ದರು.ಈಗಾಗಲೇ ರಾಜ್ಯ ಸರ್ಕಾರವು ಸಮಗ್ರವಾದ ಮಾಹಿತಿ ನೀಡಲು ಕೋರ ಲಾಗಿದೆ. ಅದರಂತೆ ಭಾಭಾ ಅಣುಶಕ್ತಿ ಇಲಾಖೆಯು ಜಾರ್ಖಂಡ ರಾಜ್ಯದಲ್ಲಿ ನಡೆಸಲಾಗುತ್ತಿರುವ ಯುರೇನಿಯಂ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡ ಲಾಗುವುದು. ಕೇಂದ್ರ ಸರ್ಕಾರದ ಸಂಸ್ಥೆ ಇದ್ದರು ಸಹ ಜನತೆಗೆ ಅವಶ್ಯಕ ಮೂಲ ಸೌಲಭ್ಯಗಳನ್ನು ನೀಡುವುದು ಕಡ್ಡಾಯ ವಾಗಿದೆ. ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ ಎಂಬುವುದು ನಮ್ಮ ಗಮನಕ್ಕೆ ಬಂದಿದೆ. ಅದರ ಬಗ್ಗೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳು ವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡ ಲಾಗವುದೆಂದು ಅವರು ಹೇಳಿದರು.‘ನೆಲ-ಜಲವನ್ನು ಹಾಗೂ ಭೂ ಖನಿಜವನ್ನು ತೆಗೆದುಕೊಂಡು ದೇಶದ ಅಭಿವೃದ್ಧಿಗೆ ತೆಗೆದುಕೊಳ್ಳುವುದು ಹೆಮ್ಮೆ ಸಂಗತಿ ಅದರ ಜೊತೆಯಲ್ಲಿ ತ್ಯಾಗ ಮಾಡಿದ ಜನತೆಯ ಬದುಕು ಬವಣೆ ಹಾಗೂ ಆರೋಗ್ಯದ ಬಗ್ಗೆ ಸದಾ ಎಚ್ಚರವಹಿಸುವುದು ಮಾತ್ರ ಅಷ್ಟೆ ಅವಶ್ಯಕ’ ಎಂಬುವುದನ್ನು ಸರ್ಕಾರವೇ ಆಗಲಿ, ಯುರೇನಿಯಂ ಕಾರ್ಪೋರೇಶನ್ ಆಫ್ ಇಂಡಿಯಾ ತನ್ನ ಹೊಣೆಗಾರಿಕೆಯಿಂದ ನುಳಚಿ ಕೊಳ್ಳಲು ಸಾಧ್ಯವಿಲ್ಲವೆಂದು ಅವರು  ಅಪರೋಕ್ಷವಾಗಿ ಎಚ್ಚರಿಕೆ ನೀಡಿದರು.ಡಾ.ಕಿಶೋರಮೂರ್ತಿ, ಗ್ರಾಪಂ ಅಧ್ಯಕ್ಷ ಗೇನುಸಂಘ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಧ್ಯಕ್ಷ ಬಸವರಾಜ ರಾಚರಡ್ಡಿ, ಭೂಮಿ ತಾಯಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಮಲ್ಲಣ್ಣ ಪರಿವಾಣ, ಮಧು ಪಾಟೀಲ್, ಭೀಮ ರೆಡ್ಡಿ ಪೊಲೀಸ್ ಪಾಟೀಲ್, ಮಲ್ಲಣ್ಣ ಮಲ್ಹಾರ, ಬಸವರಾಜ ಭೈರಡ್ಡಿ, ಶರಣು ಗದ್ದುಗೆ, ಮಾಣಿಕರಡ್ಡಿ ಮಲ್ಹಾರ, ಸದಾಶಿವ ತಾಯಂಗೋಳ, ಗೌತಮಬುದ್ಧ ಶಾಲೆಯ ಮಕ್ಕಳು ಸಭೆಯಲ್ಲಿ  ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry