ಗೋಡೆ ಕುಸಿದು ಮಹಿಳೆ ಸಾವು

7

ಗೋಡೆ ಕುಸಿದು ಮಹಿಳೆ ಸಾವು

Published:
Updated:

ದಾವಣಗೆರೆ: ಹೊಸ ಮನೆ ಕಟ್ಟುವ ಉದ್ದೇಶದಿಂದ ಶಿಥಿಲಗೊಂಡಿದ್ದ ಹಳೆ ಮನೆಯನ್ನು ಬೀಳಿಸುವಾಗ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟು, ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ಇಲ್ಲಿನ ಹಳೆ ನಗರದ ದುಗ್ಗಮ್ಮನ ಪೇಟೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.ಮನೆ ಮಾಲೀಕರಾದ ಗಂಗಮ್ಮ (45) ಮೃತಪಟ್ಟ ಮಹಿಳೆ.ಕೂಲಿ ಕಾರ್ಮಿಕರಾದ ನಿಟ್ಟುವಳ್ಳಿಯ ರಂಗಪ್ಪ (35), ಕೊಂಡಜ್ಜಿಯ ಪರಶುರಾಮ್ (35), ಪರಸಪ್ಪ (30) ತೀವ್ರವಾಗಿ ಗಾಯಗೊಂಡಿದ್ದಾರೆ. ಗಂಗಮ್ಮ  ಹೊಸ ಮನೆ ಕಟ್ಟುವುದಕ್ಕಾಗಿ ತಾವು ವಾಸವಿದ್ದ ಮನೆಯನ್ನು ಖಾಲಿ ಮಾಡಿದ್ದರು.ಶುಕ್ರವಾರ ಹಳೇ ಮನೆ ಗೋಡೆ ಬೀಳಿಸುವಾಗ ಇದ್ದಕ್ಕಿದಂತೆ ಇನ್ನೊಂದು ಪಾರ್ಶ್ವದ ಗೋಡೆ ಕುಸಿಯಿತು. ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಗಂಗಮ್ಮ ಬದುಕಿ ಉಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry