ಗೋಡೆ ಕ್ಯಾಲೆಂಡರ್ ಬಿಡುಗಡೆ

7

ಗೋಡೆ ಕ್ಯಾಲೆಂಡರ್ ಬಿಡುಗಡೆ

Published:
Updated:

ಬೆಂಗಳೂರು: `ಭಾರತ ನಿರ್ಮಾಣ-ಎಲ್ಲರ ಹಿತ-ಎಲ್ಲರ ಹಕ್ಕು' ಘೋಷಣೆಯಡಿ ಕೇಂದ್ರ ಸರ್ಕಾರದ ಜಾಹೀರಾತು ಹಾಗೂ ದೃಶ್ಯ ಪ್ರಚಾರ ನಿರ್ದೇಶನಾಲಯ (ಡಿಎವಿಪಿ) ತಯಾರಿಸಿರುವ ಕೇಂದ್ರ ಸರ್ಕಾರದ 2013ನೇ ಸಾಲಿನ ಗೋಡೆ ಕ್ಯಾಲೆಂಡರ್ ಅನ್ನು ನವದೆಹಲಿಯಲ್ಲಿ ಈಚೆಗೆ ಬಿಡುಗಡೆ ಮಾಡಲಾಯಿತು.ಕ್ಯಾಲೆಂಡರ್ ಬಿಡುಗಡೆ ಮಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಮನೀಶ್ ತಿವಾರಿ ಮಾತನಾಡಿ, `ಕೇಂದ್ರ ಸರ್ಕಾರದ ನೀತಿ ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಈ ಕ್ಯಾಲೆಂಡರ್ ನೆರವಾಗಲಿದೆ. ಸಾಮಾನ್ಯ ಜನರು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಲಿದೆ' ಎಂದರು.`ಗ್ರಾಮೀಣ ಪ್ರದೇಶದ ಜನರಿಗೆ ಗೋಡೆ ಕ್ಯಾಲೆಂಡರ್‌ಗಳ ಕುರಿತಾಗಿ ಸಹಜ ಕುತೂಹಲ ಇರುತ್ತದೆ. ಈ ಕ್ಯಾಲೆಂಡರ್‌ಗಳು ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮಹತ್ವದ ಮಾಹಿತಿಯನ್ನು ಒದಗಿಸಲಿವೆ' ಎಂದು ಅವರು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry