ಗೋಡೆ ಮೇಲೆ ಮತದಾರರ ಸಂಖ್ಯೆ ನಮೂದು

7
ಬಿಎಸ್‌ಆರ್ ಕಾಂಗ್ರೆಸ್‌ನಿಂದ ಬಳ್ಳಾರಿ ನಗರದಲ್ಲಿ `ಮನೆ ಸಮೀಕ್ಷೆ'

ಗೋಡೆ ಮೇಲೆ ಮತದಾರರ ಸಂಖ್ಯೆ ನಮೂದು

Published:
Updated:
ಗೋಡೆ ಮೇಲೆ ಮತದಾರರ ಸಂಖ್ಯೆ ನಮೂದು

ಬಳ್ಳಾರಿ: ನಗರದ ಕೆಲವು ಪ್ರದೇಶ ಗಳಲ್ಲಿನ ಮನೆ- ಮನೆಗಳೆದುರು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ್ಯ ಕರ್ತರು ತೆರಳಿ, ಮತದಾರರ ಗುರುತಿನ ಚೀಟಿಯಲ್ಲಿರುವ ಮತಗಳ ಸಂಖ್ಯೆ ಯನ್ನು ನಮೂದಿಸಿ, ತಮ್ಮ ಪಕ್ಷದ ಹೆಸರು ಬರೆಯುವ ಕಾರ್ಯವನ್ನು ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ಆರಂಭಿಸಿದೆ.ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತ ನೀಡುವವರ ಸಂಖ್ಯೆಯನ್ನು ಗುರು ತಿಸುವ ನಿಟ್ಟಿನಲ್ಲಿ ಪಕ್ಷವು ಸ್ಥಳೀಯ ಗಾಂಧಿನಗರ, ಬಸವೇಶ್ವರ ನಗರ, ತಾಳೂರು ರಸ್ತೆ ಮತ್ತಿತರ ಭಾಗದಲ್ಲಿ ಮನೆಮನೆಗೆ ತೆರಳಿ, `ಸಮೀಕ್ಷೆ' ಮಾದರಿ ಯಲ್ಲಿ ಈ ಕಾರ್ಯ ಆರಂಭಿಸಿದೆ.ಬೆಳಿಗ್ಗೆಯಿಂದಲೇ ಮತದಾರರ ಪಟ್ಟಿಯೊಂದಿಗೆ ಮನೆಮನೆಗೆ ಭೇಟಿ ನೀಡುತ್ತಿರುವ ಕೆಲವು ಅಪರಿಚಿತ ಯುವಕರು, ಆಯಾ ಮನೆಗಳಲ್ಲಿರುವ ಮತಗಳ ಸಂಖ್ಯೆ, ಮತದಾರರ ಪಟ್ಟಿ ಯಲ್ಲಿನ ಮತದಾರರ ಹೆಸರುಗಳ ಮುಂದಿರುವ ಅನುಕ್ರಮ ಸಂಖ್ಯೆಯನ್ನು ಗೋಡೆಯ ಮೇಲೆ ಬರೆಯುತ್ತಿದ್ದಾರೆ.ಈ ಕುರಿತು ನಮಗೂ ಯಾವುದೇ ವಿಷಯ ತಿಳಿಸದೆ, ಗೋಡೆ ಮೇಲೆ ಪಕ್ಷದ ಹೆಸರು ಮತ್ತು ಸಂಖ್ಯೆ ಬರೆದು ಮುಂದೆ ಹೋಗುತ್ತಿದ್ದಾರೆ. ಬರವಣಿಗೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ನೀಡಿಲ್ಲ. `ಜನಗಣತಿ' ಸಿಬ್ಬಂದಿ ಬರೆ ಯುವ ಮಾದರಿಯಲ್ಲೇ ಸಂಖ್ಯೆಗಳನ್ನು ಬರೆಯಲಾಗುತ್ತಿದೆ ಎಂದು ಗಾಂಧಿ ನಗರದ 3ನೇ ಕ್ರಾಸ್‌ನಲ್ಲಿರುವ ಮನೆ ಯೊಂದರ ಮಾಲೀಕ ಬಸವರಾಜ್ `ಪ್ರಜಾವಾಣಿ'ಗೆ ತಿಳಿಸಿದರು.ಯಾವ ಉದ್ದೇಶದಿಂದ ಈ ರೀತಿಯ ಬರಹ ಬರೆಯಲಾಗತ್ತಿದೆ ಎಂಬುದು ನಿಗೂಢವಾಗಿ ಉಳಿದಿದೆ. ಮತದಾರರ ಪಟ್ಟಿಯಲ್ಲಿ ಎಲ್ಲ ವಿವರಗಳು ಲಭ್ಯ ವಿದ್ದರೂ ಈ ರೀತಿ ಮನೆಯೆದುರು ಬರೆಯುತ್ತಿರುವುದು ಏಕೆ ಎಂದು ಕೇಳಿ ದರೂ ಯುವಕರು ಉತ್ತರ ನೀಡಲಿಲ್ಲ ಎಂದು ಅವರು ಹೇಳಿದರು.ಮತದಾರರಿಗೆ ಹಣ, ಬಟ್ಟೆ ಹಂಚಲು, ಇತರೆ ಆಮಿಷ ಒಡ್ಡಲು ಅನುಕೂಲವಾಗಲಿ ಎಂಬ ಉದ್ದೇಶ ದಿಂದ ಈ ರೀತಿಯ ಸಮೀಕ್ಷೆ ಮಾಡಿ, ಗುರುತು ಮಾಡಲಾಗುತ್ತದೆ. ಸರ್ಕಾರ ಕೈಗೊಳ್ಳುವ ಮಾದರಿಯಲ್ಲಿ ಈ ರೀತಿಯ ಸಮೀಕ್ಷೆ ನಡೆಸುವುದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂಬ ಕಾರಣ ದಿಂದ ಚುನಾವಣಾ ವಿಭಾಗದ ಸಿಬ್ಬಂದಿ ಈ ಗೋಡೆ ಬರಹಗಳನ್ನು ಅಳಿಸುವ ಕಾರ್ಯವನ್ನು ಸಂಜೆಯಿಂದ ಕೈಗೆತ್ತಿ ಕೊಂಡಿದ್ದಾರೆ ಎಂದು ಚುನಾವಣಾ ವಿಭಾಗದ ಸಿಬ್ಬಂದಿ ತಿಳಿಸಿದರು.ಚುನಾವಣೆಯ ನೀತಿಸಂಹಿತೆ ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮನೆಗಳೆದುರು ಯಾವುದೇ ಗೋಡೆಬರಹ ಬರೆಯದಂತೆ ತಾಕೀತು ಮಾಡಲಾಗಿದೆ. ಒಂದೊಮ್ಮೆ ನೀತಿ ಸಂಹಿತೆ ಉಲ್ಲಂಘನೆ ಆಗಿದ್ದು ಕಂಡುಬಂದಲ್ಲಿ ತಕ್ಷಣ ಸಂಬಂಧಿಸಿದ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಎ.ಎ. ಬಿಸ್ವಾಸ್ ತಿಳಿಸಿದರು.ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆದಿರುವುದರಿಂದ, `ಮನೆ ಸಮೀಕ್ಷೆ' ಕುರಿತು ಮಾಹಿತಿ ನೀಡಲು ಪಕ್ಷದ ಮುಖಂಡರು  ಸಂಪರ್ಕಕ್ಕೆ ಸಿಗಲಿಲ್ಲ.2011ರ ನವೆಂಬರ್‌ನಲ್ಲಿ ನಡೆದಿದ್ದ ಬಳ್ಳಾರಿ ಗ್ರಾಮೀಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಸಂದರ್ಭವೂ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ಪರ ಇದೇ ರೀತಿಯ ಸಮೀಕ್ಷೆ ನಡೆಸಿ, ಮತದಾರರ ಸಂಖ್ಯೆಗಳನ್ನು ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry