ಗೋಣಿಕೊಪ್ಪಲು : ರಸ್ತೆ ಸ್ಥಿತಿ ಬಿಂಬಿಸಿದ ಸ್ತಬ್ಧಚಿತ್ರ

7

ಗೋಣಿಕೊಪ್ಪಲು : ರಸ್ತೆ ಸ್ಥಿತಿ ಬಿಂಬಿಸಿದ ಸ್ತಬ್ಧಚಿತ್ರ

Published:
Updated:

ಗೋಣಿಕೊಪ್ಪಲು: ಜಿಲ್ಲೆಯ ರಸ್ತೆ ದುಸ್ಥಿತಿ, ಗೋಣಿಕೊಪ್ಪಲಿನ  ಪುಷ್ಪ ಕೊಲೆ ಪ್ರಕರಣ, ಮಾದಕ ವಸ್ತುಗಳಿಗೆ ವಿದ್ಯಾರ್ಥಿಗಳ ಬಲಿ ಮುಂತಾದ ಘಟನೆಗಳನ್ನು  ಬಿಂಬಿಸುವ ಸ್ತಬ್ದಚಿತ್ರ ಮೆರವಣಿಗೆ  ಗೋಣಿಕೊಪ್ಪಲು ದಸರಾ ಉತ್ಸವದಲ್ಲಿ  ಗಮನಸೆಳೆಯಿತು.ಮಧ್ಯಾಹ್ನ 3ಗಂಟೆಗೆ ಆರ್‌ಎಂಸಿ ಆವರಣದಿಂದ ಹೊರಟ ಮೆರವಣಿ ಗೆಯಲ್ಲಿ  ಪಾಲ್ಗೊಂಡಿದ್ದ ಸ್ತಬ್ಧಚಿತ್ರ ಗಳಲ್ಲಿ ಗಾಂಧಿವಾದಿ ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಬೆಂಬಲ ಸೂಚಿ ಸುವ ಮತ್ತು ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕರ ಹೋರಾಟದ ವಿರುದ್ಧದ ಘೋಷಣೆ ಮೊಳಗಿಸಿದವು.ಗೋಣಿಕೊಪ್ಪಲಿನ ನವಚೇತನ ಸ್ವ ಸಹಾಯ ಸಂಘದ `ಒಬ್ಬ ಹಜಾರೆ ಕೋಟಿ ಕೂಗು, ಭ್ರಷ್ಟಾಚಾರಕ್ಕೆ  ಧಿಕ್ಕಾರ ಅಣ್ಣಾಹಜಾರೆಗೆ ಜಯಕಾರ~ಎಂಬ ಧೈಯ ವಾಕ್ಯವುಳ್ಳ ಸ್ತಬ್ಧಚಿತ್ರ ಎಲ್ಲರ ಗಮನಸೆಳೆಯಿತು. ಯರವ ಜನಾಂಗದ ಒಕ್ಕೂಟದ ಸ್ತಬ್ಧಚಿತ್ರ, ಗೋಣಿ ಕೊಪ್ಪಲು ಆಟೋಚಾಲಕರ ಮತ್ತು ಮಾಲಿಕರ ಸಂಘದ  ಸ್ತಬ್ದಚಿತ್ರಗಳು ಕೂಡ ಇದೇ ವಸ್ತುವನ್ನು ಒಳ ಗೊಂಡಿದ್ದವು.ಸ್ಟಾರ್ ಬಾಯ್ಸ  ಸಂಘದವರು ನಿರ್ಮಿಸಿದ್ದ ಆಸ್ಪತ್ರೆ ಹಾಗೂ ಕಚೇರಿ ಗಳಲ್ಲಿ  ನಡೆಯುವ  ಬಡ ರೋಗಿಗಳ ಶೋಷಣೆ, ತಾರತಮ್ಯ ಮತ್ತು ಭ್ರಷ್ಠಾಚಾರ ವನ್ನು ಬಿಂಬಿಸುವ ಚಿತ್ರ ಉತ್ತಮವಾಗಿತ್ತು.ಜಿಲ್ಲೆಯ ರಸ್ತೆಗಳ ದುರವಸ್ಥೆ ಮತ್ತು ಕೆಟ್ಟ ರಸ್ತೆಯಲ್ಲಿ ಆಗಿಂದಾಗ್ಗೆ ಸಂಭವಿ ಸುತ್ತಿರುವ ಅಪಘಾತ ಬಿಂಬಿಸಿದ ಪೊನ್ನಂಪೇಟೆ ಕಾಟ್ರಕೊಲ್ಲಿ ಮಾತಾಯಿ ಪುರುಷ ಸ್ವಸಹಾಯ ಸಂಘ  ಮತ್ತು ಫ್ರೀಡಂ ಬಾಯ್ಸ ಸಂಘ ನಿರ್ಮಿಸಿದ್ದ ಎತ್ತಿನಗಾಡಿ ಸ್ತಬ್ಧಚಿತ್ರಗಳು  ಅತ್ಯುತ್ತಮ ವಾಗಿದ್ದವು, ಫ್ರೀಡಂ ಬಾಯ್ಸಮ  `ನಮ್ಮ ಊರಿನ ರಸ್ತೆಗೆ ಎತ್ತಿನಗಾಡಿಯೇ ಸೂಕ್ತ~, ಮಾತಾಯಿ ಸಂಘದ `ಗಡಿಯಾಚೆ ರಸ್ತೆ ಸೂಪರ್, ಕೊಡಗಿನ ರಸ್ತೆ ಢಮಾರ್~ ಎಂಬ ವ್ಯಾಕ್ಯದ  ಸ್ತಬ್ದ ಚಿತ್ರ ಕೊಡಗಿನ ರಸ್ತೆಯ ದುಃಸ್ಥಿತಿಯನ್ನು ಬಿಂಬಿಸಿ ಆಡಳಿತ ವ್ಯವಸ್ಥೆಯನ್ನು ಅಣುಕಿಸುತ್ತಿದ್ದವು.ದೇಶ ಪ್ರೇಮಿ  ಯುವಕ ಸಂಘದ ಮೊಬೈಲ್ ಬಳಕೆಯಿಂದ ಉಂಟಾಗುವ ಅಫಘಾತ, ವಿದ್ಯುತ್ ಗುತ್ತಿಗೆದಾರರ ಸಂಘದ ವಿದ್ಯುತ್ ಅಪಘಾತದಿಂದ ಸಂಭವಿಸುವ  ದುರ್ಮರಣ, ಸೀಗೆತೋಡು ಪ್ಲೇಬಾಯ್ ಸಂಘದ  ಮರೆಯಾದ ಗಾಂಧಿ ಶಿಕ್ಷಣ ತತ್ವ, ನವಚೇತನ ದಸರಾ ಸಮಿತಿಯ  ಕಾವೇರಿ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಮರಬಿದ್ದ ಚಿತ್ರ, ಇಂಡಿಯನ್ ಯುವಕ ಸಂಘದ  ಮಾದಕ ವಸ್ತುಗಳಿಗೆ  ವಿದ್ಯಾರ್ಥಿಗಳ ಬಲಿ, ಯುವ ದಸರಾ ಸಮಿತಿಯ  ದೀಪದ ಹಬ್ಬದ ಸಂಭ್ರಮದಲ್ಲಿ ಮನೆ ದೀಪ ಆರದಿರಲಿ ಎಂಬ ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಉಂಟಾಗುವ ಅಪಾಯದ ಸಂದೇಶದ ಹೊತ್ತ ಸ್ತಬ್ದ ಚಿತ್ರ ಅತ್ಯುತ್ತಮವಾಗಿದ್ದವು. ಕೆಎನ್‌ಎಸ್‌ಎಸ್‌ನ ಬಲಿ ಚಕ್ರವರ್ತಿ, ಬ್ರಹ್ಮಕುಮಾರಿ  ಈಶ್ವರಿ ವಿಶ್ವವಿದ್ಯಾಲ ಯದ  ಸ್ತಬ್ದ ಚಿತ್ರ  ಸಾಧಾರಣವಾಗಿದ್ದವು. ಈ ಬಾರಿ ಪಾಲ್ಗೊಂಡಿದ್ದ ಸ್ತಬ್ಧಚಿತ್ರಗಳಲ್ಲಿ ಸ್ವಲ್ಪಮಟ್ಟಿಗೆ  ವಸ್ತುವಿನ ದೃಷ್ಟಿಯಲ್ಲಿ ಭಿನ್ನವಾಗಿದ್ದರೂ ಜನತೆಗೆ ಯಾವುದೇ ವಿಷಯದ ಬಗ್ಗೆ ಸ್ಪಷ್ಟ ಸಂದೇಶ ಮುಟ್ಟಿಸುವಲ್ಲಿ  ವಿಫಲವಾದವು ಎಂಬುದು ಜನತೆಯ ಅಭಿಪ್ರಾಯವಾಗಿತ್ತು.ಮಧ್ಯಾಹ್ನ 3ಗಂಟೆಗೆ ಆರ್‌ಸಿ ಆವರಣದಿಂದ ಹೊರಟ ಸ್ತಬ್ಧಚಿತ್ರ ಮೆರವಣಿಗೆ ಪಟ್ಟಣದ ಮುಖ್ಯರಸ್ತೆ ಯಲ್ಲಿ ಸಾಗಿ ಪಾಲಿಬೆಟ್ಟ ರಸ್ತೆಗೆ ತೆರಳಿ ಬಳಿಕ ಮರಳಿ ಮುಖ್ಯರಸ್ತೆಗೆ ಬಂದು ಉಮಾಮಹೇಶ್ವರಿ ದೇವಸ್ಥಾನದ ಬಳಿ  ಹೊರಳಿ ಆಸ್ಪತ್ರೆ ಹಿಂಭಾಗಕ್ಕೆ  ಬಂದು  ಸಮಾಪ್ತಿಗೊಂಡವು.  ಸ್ತಬ್ಧ ಚಿತ್ರ ಮೆರವಣಿಗೆ ನೋಡಲು ಪಟ್ಟಣದ ರಸ್ತೆಯ ಇಕ್ಕೆಲಗಳಲ್ಲಿ ಜನತೆ ಸಾಲು ಗಟ್ಟಿನಿಂತಿದ್ದರು. ಈ ಬಾರಿ ವರುಣನ ಭಯವಿಲ್ಲದ್ದರಿಂದ ಸ್ತಬ್ಧ ಚಿತ್ರ ಸಾವಧಾನವಾಗಿ ಸಾಗಿತ್ತು. ಜನತೆಯೂ ಕೂಡ ತಾಳ್ಮೆಯಿಂದ ನಿಂತು ವೀಕ್ಷಿಸಿದರು. ಮೆರವಣಿಗೆಯ ಮುಂಚೂಣಿಯಲ್ಲಿ  ಮಂಡ್ಯದ ಕಸ್ಮಾಳೆ ನೃತ್ಯ, ಶಿವಮೊಗ್ಗದ  ಡೊಳ್ಳುಕುಣಿತ ಗಮನಸೆಳೆದವು.ಸ್ತಬ್ಧ ಚಿತ್ರ ಆಯೋಜಿಸಿದ್ದ ದಸರಾ ನಾಡ ಹಬ್ಬ ಸಮಿತಿಯ ಅಧ್ಯಕ್ಷ ಪೊನ್ನಿಮಾಡ ಸುರೇಶ್,  ಕಾರ್ಯಾಧ್ಯಕ್ಷ ಕುಪ್ಪಂಡ ವೇಣು, ಗೌರವಾಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ,  ಗೋಪಿಚಿಣ್ಣಪ್ಪ, ಎಂ.ಜೆ.ಮೈಕಲ್ ಮುಂತಾದವರು ಮೆರವಣಿಗೆಯ ಮುಂಚೂಣಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry