ಗೋಣಿಕೊಪ್ಪಲು: ಸಾಧಾರಣ ಮಳೆಗೆ ಕದಿರೊಡೆದ ಬತ್ತ

7

ಗೋಣಿಕೊಪ್ಪಲು: ಸಾಧಾರಣ ಮಳೆಗೆ ಕದಿರೊಡೆದ ಬತ್ತ

Published:
Updated:
ಗೋಣಿಕೊಪ್ಪಲು: ಸಾಧಾರಣ ಮಳೆಗೆ ಕದಿರೊಡೆದ ಬತ್ತ

ಗೋಣಿಕೊಪ್ಪಲು: ಪೊನ್ನಂಪೇಟೆ, ಗೋಣಿಕೊಪ್ಪಲು, ತಿತಿಮತಿ, ಕುಂದ ಮೊದಲಾದ ಕಡೆ ಮಂಗಳವಾರ ಸಾಧಾರಣ  ಮಳೆಯಾಗಿದ್ದು, ಇದರಿಂದ ಕದಿರೊಡೆಯಲು ಕಾದಿದ್ದ ಬತ್ತಕ್ಕೆ ಸಹಕಾರಿಯಾಗಿದೆ.ಮಳೆ ಆಶ್ರಯದಲ್ಲಿ ಬೆಳೆಯುವ ಕೊಡಗಿನ ಬತ್ತದ ಕೃಷಿಗೆ ಅಕ್ಟೋಬರ್ ಅಂತ್ಯದವರೆಗೆ  ಬೀಳುವ ಮಳೆಯೇ  ಆಸರೆ. ಹಳ್ಳದ ಗದ್ದೆಗಳು ಮಳೆ ನೀರನ್ನು ಹಿಡಿದಿಟ್ಟುಕೊಂಡು ಉತ್ತಮ ಫಸಲು ನೀಡುತ್ತವೆ. ಆದರೆ ಮೇಡು ಗದ್ದೆಗಳಿಗೆ ಮಾತ್ರ ಹೆಚ್ಚಾಗಿ ಮಳೆ ಆಗಲೇ ಬೇಕು.ಆದರೆ ಈ ಬಾರಿ ಸಕಾಲಕ್ಕೆ ಮಳೆ ಬೀಳದೆ ಬತ್ತದ ಕೃಷಿಗೆ ತೀವ್ರ ಹಿನ್ನಡೆಯಾಗಿತ್ತು. ಗದ್ದೆಯಲ್ಲಿದ್ದ ಅಲ್ಪ ಸ್ವಲ್ಪ ನೀರನ್ನು ಸಂಗ್ರಹಿಸಿ ನಾಟಿ ಮಾಡಲಾಗಿತ್ತಾದರೂ ಬಳಿಕ ಮಳೆಯಿಲ್ಲದೇ ಒಣಗುತ್ತಿತ್ತು. ಕಳೆದ 15 ದಿನಗಳಿಂದ  ಮಳೆಯಿಲ್ಲದೇ ಬಿಸಿಲಿಗೆ ಹಳ್ಳದ ಗದ್ದೆಗಳು ಕೂಡ ಒಣಗಿ ಬಿರಕು ಬಿಟ್ಟಿದ್ದವು. ಗೊಬ್ಬರ ಹಾಕಲು ರೈತರು ಚಿಂತಿಸುತ್ತಿದ್ದರು.ಇದೀಗ ಬೀಳುತ್ತಿರುವ ಮಳೆ ಕದಿರೊಡೆಯುವ ಬತ್ತದಗೊನೆಗೆ ಉಸಿರಾಡಲು ಅನುಕೂಲ ಮಾಡಿಕೊಟ್ಟಿದೆ. ತಡವಾಗಿಯಾದರೂ ಬೀಳುತ್ತಿರುವ ಮಳೆ ಮತ್ತೆ ಸ್ವಲ್ಪ ಸಮಯ ಬಿದ್ದರೆ ಒಳ್ಳೆಯದು ಎಂಬುದು ರೈತರ ಅನಿಸಿಕೆ. ಮಳೆ ಬಿದ್ದರೆ ಕೇವಲ ಬತ್ತಕ್ಕೆ ಮಾತ್ರವಲ್ಲ ಕಾಫಿ, ಕುಡಿಯುವ ನೀರಿಗೂ ಅನುಕೂಲವಾಗಲಿದೆ.ವನ್ಯಜೀವಿಗಳಿಗಾಗಿ ನಿರ್ಮಿಸಿರುವ ನಾಗರಹೊಳೆ ಅರಣ್ಯದೊಳಗಿನ ಕೆರೆಗಳಲ್ಲಿ ಈಗಾಗಲೆ ನೀರು ಇಲ್ಲದಂತಾಗಿದೆ. ಕೆಲವು ಕೆರೆಗಳು ಸಂಪೂರ್ಣ ಬತ್ತಿ ಹೋಗಿದ್ದರೆ ಮತ್ತೆ ಕೆಲವು ಕೆರೆಗಳ ಅಂಗಳದಲ್ಲಿ ಅಲ್ಪಸ್ವಲ್ಪ ನೀರು ಕಂಡು ಬರುತ್ತಿದೆ.

 

ವಾಡಿಕೆಯಂತೆ ಅಕ್ಟೋಬರ್ ತಿಂಗಳಲ್ಲಾದರೂ ಮಳೆ ಬೀಳದಿದ್ದರೆ ವನ್ಯಜೀವಿಗಳ ಕುಡಿಯುವ ನೀರಿಗೆ ಭೀಕರ ಬರ ಎದುರಾಗಲಿದೆ ಎನ್ನುತ್ತಾರೆ ಮತ್ತಿಗೋಡು ವಲಯ ಅರಣ್ಯಾಧಿಕಾರಿ ದೇವರಾಜು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry