ಗೋದ್ರೆಜ್-ಇ ಸಿಟಿಗೆ ಚಾಲನೆ

7

ಗೋದ್ರೆಜ್-ಇ ಸಿಟಿಗೆ ಚಾಲನೆ

Published:
Updated:

ಬೆಂಗಳೂರು: `ಗೋದ್ರೆಜ್ ಪ್ರಾಪರ್ಟೀಸ್ ಲಿ~(ಜಿಪಿಎಲ್), ನಗರದ ಹೊರವಲಯ ಎಲೆಕ್ಟ್ರಾನಿಕ್ ಸಿಟಿ ಸಮೀಪ ಒಟ್ಟು 800 ಮನೆಗಳ, ರೂ. 250 ಕೋಟಿ ಮೌಲ್ಯದ ಅತಿ ದೊಡ್ಡ ವಸತಿ ಸಂಕೀರ್ಣ `ಗೋದ್ರೆಜ್-ಇ ಸಿಟಿ~ ನಿರ್ಮಾಣ ಯೋಜನೆ ಆರಂಭಿಸಿದೆ.`15 ಎಕರೆಯಲ್ಲಿ ಮೂರು ಹಂತಗಳಲ್ಲಿ ಸಂಕೀರ್ಣ ನಿರ್ಮಾಣವಾಗಲಿದ್ದು, ಯೋಜನೆ ಐದು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಒಟ್ಟು ಸಂಕೀರ್ಣದ ವಿಸ್ತಾರ 10 ಲಕ್ಷ ಚದರಡಿ. 1ನೇ ಹಂತದಲ್ಲಿ ತಲಾ 5 ಅಂತಸ್ತುಗಳ 8 ಸಂಕೀರ್ಣಗಳಿರಲಿದ್ದು, ಇಲ್ಲಿ 280 ಮನೆಗಳಿರುತ್ತವೆ~ ಎಂದು `ಜಿಪಿಎಲ್~ ವ್ಯವಸ್ಥಾಪಕ ನಿರ್ದೇಶಕ ಫಿರೋಜ್ ಷಾ ಗೋದ್ರೆಜ್ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.ಐಟಿ ಕಂಪೆನಿ `ಸಿಸ್‌ಫೋರ್ ಟೆಕ್ನಾಲಜೀಸ್~ ವ್ಯವಸ್ಥಾಪಕ ನಿರ್ದೇಶಕ ಆರ್.ದಿನೇಶ್ ಒಡೆತನದ ರಿಯಲ್ ಎಸ್ಟೇಟ್ ಕಂಪೆನಿ `ಯೂನಿವರ್ಸಲ್ ಬಿಲ್ಡರ್ಸ್~ ಜಂಟಿ ಸಹಭಾಗಿತ್ವದಲ್ಲಿ `ಗೋದ್ರೆಜ್-ಇ ಸಿಟಿ~ ನಿರ್ಮಾಣವಾಗುತ್ತಿದೆ. 2 ಮತ್ತು 3 ಕೊಠಡಿಗಳ ಆಧುನಿಕ ಶೈಲಿ ಮನೆಗಳು 964ರಿಂದ 1625 ಚದರಡಿ ಇರಲಿವೆ. ಆರಂಭಿಕ ಬೆಲೆ ರೂ. 37 ಲಕ್ಷ. 1ನೇ ಹಂತದ ಯೋಜನೆಯ ಮೂರನೇ ಒಂದು ಭಾಗದಷ್ಟು ಮನೆಗಳನ್ನು ಗ್ರಾಹಕರು  ಈಗಾಗಲೇ ಕಾಯ್ದಿರಿಸಿದ್ದಾರೆ ಎಂದು ಷಾ ವಿವರ ನೀಡಿದರು.`1ನೇ ಹಂತ ಎರಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಭೂಮಿ ಸೇರಿದಂತೆ ಶೇ 89ರಷ್ಟು ಹೂಡಿಕೆ ಯೂನಿವರ್ಸಲ್‌ನದಾಗಿದ್ದು, ಗೋದ್ರೆಜ್ ಶೇ 11ರಷ್ಟು ಬಂಡವಾಳ ತೊಡಗಿಸುತ್ತಿದೆ. ಗೋದ್ರೆಜ್ ಬ್ರಾಂಡ್‌ನೇಮ್ ಸಹ ಇಲ್ಲಿ ಮುಖ್ಯವಾಗಿದೆ~ ಎಂದು ಪ್ರಶ್ನೆಗಳಿಗೆ ಆರ್.ದಿನೇಶ್ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry