ಬುಧವಾರ, ನವೆಂಬರ್ 13, 2019
28 °C

ಗೋಧಿ ತಳಿ: ಭಾರತ-ಅಮೆರಿಕ ಒಪ್ಪಂದ

Published:
Updated:

ವಾಷಿಂಗ್ಟನ್ (ಪಿಟಿಐ): ಗರಿಷ್ಠ ಮಟ್ಟದ ಉಷ್ಣತೆ ತಡೆದುಕೊಳ್ಳುವ ಸಾಮರ್ಥ್ಯ ಇರುವ ಗೋಧಿ ತಳಿಗಳನ್ನು ಅಭಿವೃದ್ಧಿ ಪಡಿಸಲು ಭಾರತ-ಅಮೆರಿಕ ಜಂಟಿ ಸಂಶೋಧನೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿವೆ.ಜಾಗತಿಕ ತಾಪಮಾನ ಏರಿಕೆಯು ತೀವ್ರಗೊಳ್ಳುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ ಇಂತಹ ತಳಿಯ ಅಭಿವೃದ್ಧಿ ತುರ್ತು ಅಗತ್ಯ ಎಂದು  ಈ ಸಂಶೋಧನೆಯಲ್ಲಿ ತೊಡಗಿರುವ ವಾಷಿಂಗ್ಟನ್ ಸ್ಟೇಟ್ ಯುನಿವರ್ಸಿಟಿಯ  ವಿಜ್ಞಾನಿಗಳ ತಂಡ ಹೇಳಿದೆ. ಅಮೆರಿಕದ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ (ಯುಎಸ್‌ಎಐಡಿ),  ಭಾರತೀಯ ಕೃಷಿ ಸಂಶೋಧನೆ ಮಂಡಳಿ (ಐಸಿಎಆರ್) ಮತ್ತು ಗೋಧಿ ಸಂಶೋಧನೆ ನಿರ್ದೇಶನಾಲಯ (ಡಿಡಬ್ಲ್ಯುಆರ್) ಈ ಸಂಶೋಧನೆಗೆ ನೆರವು ನೀಡಲಿವೆ.  ಪ್ರತಿಕೂಲ ಹವಾಮಾನದಲ್ಲೂ ಬೆಳೆಯಬಲ್ಲ ಸಾಮರ್ಥ್ಯ ಇರುವ ಇಂತಹ ಗೋಧಿ ತಳಿಯನ್ನು ಮುಂದಿನ 5 ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ಗರಿಷ್ಠ ಉಷ್ಣತೆ ಮತ್ತು ನೀರಿನ ಅಭಾವ ಇರುವ ಉತ್ತರ ಭಾರತದ ನದಿ ಬಯಲುಗಳಲ್ಲಿ ಈ ತಳಿಗಳ ಪ್ರಯೋಗ ನಡೆಯಲಿದೆ  ಎಂದು `ಯುಎಸ್‌ಎಐಡಿ' ಪ್ರಕಟಣೆ ತಿಳಿಸಿದೆ.ಸದ್ಯ ಲಭ್ಯವಿರುವ ಗೋಧಿ ತಳಿಗಳು ಅಧಿಕ ಉಷ್ಣತೆಯ  ಪ್ರದೇಶಗಳಲ್ಲಿ ಕನಿಷ್ಠ ಮಟ್ಟದ ಇಳುವರಿ ನೀಡುತ್ತಿವೆ.

ಪ್ರತಿಕ್ರಿಯಿಸಿ (+)