ಗೋಧ್ರಾ ಹತ್ಯಕಾಂಡ ತೀರ್ಪು: 31 ಮಂದಿ ಆರೋಪಿತರು

7

ಗೋಧ್ರಾ ಹತ್ಯಕಾಂಡ ತೀರ್ಪು: 31 ಮಂದಿ ಆರೋಪಿತರು

Published:
Updated:

 ಗಾಂಧಿನಗರ, (ಐಎಎನ್ಎಸ್): ಗೋಧ್ರಾ ಹತ್ಯಾಕಾಂಡ ಪ್ರಕರಣದ ಕುರಿತು ಮಂಗಳವಾರ ತೀರ್ಪು ನೀಡಿರುವ ಇಲ್ಲಿನ ತ್ವರಿತ ನ್ಯಾಯಾಲಯವು ಒಟ್ಟು 31 ಮಂದಿಯನ್ನು ಆರೋಪಿಗಳೆಂದು ತೀರ್ಮಾನಿಸಿದೆ. ಜೊತೆಗೆ ಆಪಾದನೆ ಹೊತ್ತಿದ್ದ  ಇತರ 63 ಮಂದಿಯನ್ನು  ನಿರಪರಾಧಿಗಳೆಂದು ಗುರುತಿಸಿ ಬಿಡುಗಡೆ ಮಾಡಿದೆ.

ಈ ತ್ವರಿತ ನ್ಯಾಯಾಲಯವು ಆರೋಪಿಗಳಿಗೆ ನೀಡುವ ಶಿಕ್ಷೆಯ ಪ್ರಮಾಣವನ್ನು ಇದೇ ಫೆ.25ರಂದು ಪ್ರಕಟಿಸಲಿದೆ.

2002ರಲ್ಲಿ ಸಾಬರಮತಿ ರೈಲಿನ 6 ಬೋಗಿಗಳಿಗೆ ಬೆಂಕಿ ಹಚ್ಚಿದಾಗ ಬೋಗಿಗಳಲ್ಲಿದ್ದ 59 ಜನರು ಸಾವಿಗೀಡಾಗಿದ್ದರು. ಈ ಘಟನೆ ~ಗೋಧ್ರಾ ರೈಲು ಹತ್ಯಾಕಾಂಡ~ವೆಂದೇ ಪ್ರಸಿದ್ಧವಾಗಿದೆ. ಈ ಹತ್ಯಾಕಾಂಡದಲ್ಲಿ ಸತ್ತವರು ಕರ ಸೇವಕರು. ಅವರು ಅಯೋಧ್ಯೆಯಿಂದ ಗುಜರಾತಿಗೆ ಹಿಂದಿರುಗಿ ಬರುತ್ತಿದ್ದಾಗ ಈ ದುರ್ಘಟನೆ ನಡೆದಿತ್ತು.

ಈ ಗೋಧ್ರಾ ಹತ್ಯಾಕಾಂಡದ ನಂತರ ಗುಜರಾತಿನಲ್ಲಿ ಕೋಮುಗಲಭೆಗಳು ನಡೆದು 1200ಕ್ಕೂ ಅಧಿಕ ಮುಸ್ಲಿಂರು ಗಲಭೆಯಲ್ಲಿ ಪ್ರಾಣಕಳೆದುಕೊಂಡಿದ್ದರು. ಇದು ಸ್ವಾತಂತ್ರ್ಯದ ನಂತರ ನಡೆದ ಅತಿ ದೊಡ್ಡ ಕೋಮುಗಲಭೆ ಎಂಬ ಅಪಖ್ಯಾತಿ ಪಡೆದಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry